ನ್ಯೂಯಾರ್ಕ್, ಅಮೆರಿಕ :ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಏಪ್ರಿಲ್ 28ರಂದು ಉಕ್ರೇನ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಆಂಟೋನಿಯೊ ಗುಟೆರೆಸ್ ಮುಂದಿನ ವಾರ ಉಕ್ರೇನ್ಗೆ ಭೇಟಿ ನೀಡಲಿದ್ದಾರೆ. ಅವರು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರೊಂದಿಗೆ ಕಾರ್ಯಕಾರಿ ಸಭೆಯನ್ನು ನಡೆಸಲಿದ್ದಾರೆ ಮತ್ತು ಏಪ್ರಿಲ್ 28ರಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಅದರ ನಂತರ ಉಕ್ರೇನ್ನ ನೆರವಿನ ಕುರಿತಂತೆ ಚರ್ಚಿಸಲು ಯುಎನ್ ಏಜೆನ್ಸಿಗಳ ಸಿಬ್ಬಂದಿಯನ್ನು ಭೇಟಿಯಾಗಲಿದ್ದಾರೆ ವಿಶ್ವಸಂಸ್ಥೆಯ ಪತ್ರಿಕಾ ಹೇಳಿಕೆ ತಿಳಿಸಿದೆ.