ರೋಮ್(ಇಟಲಿ): ದೇಶದ ಉತ್ತರ ಭಾಗದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಮಮಾರ್ಮೊಲಾಡಾದ ಶಿಖರದಲ್ಲಿ ಹಿಮಗೋಡೆ ಕುಸಿದು ಆರು ಜನರು ಬಲಿಯಾಗಿದ್ದಾರೆ. ಇನ್ನೂ 12 ಜನರು ಕಾಣೆಯಾಗಿದ್ದಾರೆ. ವೆನೆಟೊ ಪ್ರದೇಶದಲ್ಲಿ ದಾಖಲೆಯ ಮಟ್ಟದಲ್ಲಿ ಉಷ್ಣಾಂಶ ಹೆಚ್ಚುತ್ತಿರುವುದೇ ಹಿಮಕುಸಿತಕ್ಕೆ ಕಾರಣ ಎಂದು ತಿಳಿದುಬಂದಿದೆ. ವೆನೆಟೊ ನಾಗರಿಕ ರಕ್ಷಣಾಧಿಕಾರಿ ಮಾಹಿತಿ ನೀಡಿ, ಕಾಣೆಯಾದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಇಟಲಿಯಲ್ಲಿ ಹಿಮಕುಸಿತ: ಆರು ಮಂದಿ ಸಾವು, 12 ಜನರು ನಾಪತ್ತೆ - ಇಟಾಲಿಯಲ್ಲಿ ಹಿಮಕುಸಿತ
ಇಟಲಿಯ ಉತ್ತರ ಭಾಗದಲ್ಲಿ ಹಿಮಕುಸಿತವಾಗಿ ಆರು ಜನರು ಮೃತಪಟ್ಟು, 12 ಜನರು ಕಾಣೆಯಾಗಿದ್ದಾರೆ.
ಇಟಾಲಿಯಲ್ಲಿ ಹಿಮಕುಸಿತದಿಂದಾಗಿ 6 ಜನರು ಸಾವು
ಸಾಮಾನ್ಯವಾಗಿ ಆಲ್ಪನ್ ಎತ್ತರದ ಶಿಖರಗಳಲ್ಲಿ ವರ್ಷಪೂರ್ತಿ 0 ಡಿಗ್ರಿಗಿಂತಲೂ ಕಡಿಮೆ ತಾಪಮಾನವಿರುತ್ತದೆ. ಆದರೆ ಮಾರ್ಮೊಲಾಡಾದ ಶಿಖರದಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದೆ. ಇದರಿಂದ ಹಿಮ ಕರಗಲು ಪ್ರಾರಂಭವಾಗಿದೆ. ಈ ಹವಾಮಾನ ವೈಪರೀತ್ಯದಿಂದಾಗಿ ಮತ್ತಷ್ಟು ಹಿಮಕುಸಿತ ಸಂಭವಿಸುವ ಸಾಧ್ಯತೆಗಳು ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಡೆನ್ಮಾರ್ಕ್ ಶಾಪಿಂಗ್ ಮಾಲ್ನಲ್ಲಿ ಗುಂಡಿನ ದಾಳಿ: ಮೂವರು ಸಾವು, ಹಲವರಿಗೆ ಗಾಯ