ಅಮ್ಮನ್: ಜೋರ್ಡಾನ್ ಕ್ರೌನ್ ಪ್ರಿನ್ಸ್ ಹುಸೇನ್ ಬಿನ್ ಅಬ್ದುಲ್ಲಾ ಗುರುವಾರ ಸೌದಿ ಅರೇಬಿಯಾ ವಾಸ್ತುಶಿಲ್ಪಿ ರಾಜ್ವಾ ಅಲ್ ಸೈಫ್ ಅವರನ್ನು ವಿವಾಹವಾದರು. ಅದ್ದೂರಿ ವಿವಾಹ ಸಮಾರಂಭಕ್ಕೆ ವಿಶ್ವದಾದ್ಯಂತದ ರಾಜಮನೆತನದವರು ಭಾಗವಹಿಸಿದ್ದರು. ಈ ಸಮಾರಂಭವು ರಾಜಧಾನಿ ಅಮ್ಮನ್‌ನಲ್ಲಿರುವ ಜಹ್ರಾನ್ ಅರಮನೆಯಲ್ಲಿ ನಡೆಯಿತು. ರಾಜ ಅಬ್ದುಲ್ಲಾ II ಮತ್ತು ರಾಣಿ ರಾನಿಯಾ, ಅವರ ತಂದೆ ದಿವಂಗತ ಹುಸೇನ್ ಬಿನ್ ತಲಾಲ್ ಅವರ ವಿವಾಹಗಳಂತೆ ಈ ವಿವಾಹ ಕೂಡ ಅದ್ದೂರಿಯಾಗಿ ನೆರವೇರಿದೆ.
ರಾಜನ ಹಿರಿಯ ಮಗನಾದ ಅಬ್ದುಲ್ಲಾ ಮತ್ತು ಅಲ್ ಸೈಫ್ ಇಬ್ಬರೂ 28 ವರ್ಷ ವಯಸ್ಸಿನವರು. ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಮತ್ತು ಬ್ರಿಟನ್‌ನ ರಾಜಕುಮಾರ, ವೇಲ್ಸ್ ರಾಜಕುಮಾರಿ ಹಾಗೂ ಅವರ ಕುಟುಂಬ ಸದಸ್ಯರು ಸೇರಿ 140 ಅತಿಥಿಗಳು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.
1999 ರಿಂದ ಸಿಂಹಾಸನದಲ್ಲಿರುವ ರಾಜ ಅಬ್ದುಲ್ಲಾ II(61) ತನ್ನ ಹಿರಿಯ ಮಗನನ್ನು ತನ್ನ ಉತ್ತರಾಧಿಕಾರಿ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಹಲವು ಬಾರಿ ಸಭೆ ನಡೆಸಿದ್ದಾರೆ ಎಂದು ಮಾಜಿ ಮಾಹಿತಿ ಸಚಿವ ಸಮೀಹ್ ಮಾಯ್ತಾಹ್ ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು. 2021ರಲ್ಲಿ ರಾಜಮನೆತನದ ದಂಗೆಯನ್ನು ನಡೆಸಲು ಪ್ರಯತ್ನಿಸಿದ ಆರೋಪದ ಮೇಲೆ ಮಲಸಹೋದರ ಹಮ್ಜಾನನ್ನು ನಂತರ ಗೃಹಬಂಧನದಲ್ಲಿ ಇರಿಸಲಾಯಿತು. ಏಪ್ರಿಲ್ 2022ರಲ್ಲಿ, ಹಮ್ಜಾ ಅವರು ತಮ್ಮ ರಾಜಮನೆತನದ ಬಿರುದನ್ನು ತ್ಯಜಿಸಿದರು. ಅವರ ಸ್ವಂತ ಮೌಲ್ಯಗಳು ಇನ್ನು ಮುಂದೆ ನಮ್ಮ ಸಂಸ್ಥೆಗಳ ಜೊತೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದರು.
ಹೊಸದಾಗಿ ಬಿರುದಾಂಕಿತ ವಧು ರಾಜಕುಮಾರಿ ರಾಜ್ವಾ ರಿಯಾದ್‌ನಲ್ಲಿ ಜನಿಸಿದರು. ಅವರು ಆಧುನಿಕ ಸೌದಿ ಅರೇಬಿಯಾದ ನಜ್ದ್‌ನ ಅಲ್ ಸುದೈರಿ ಕುಟುಂಬದಿಂದ ಬಂದವರು. ಸೌದಿ ರಾಜಮನೆತನದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅವರು ಸಂಪ್ರದಾಯವಾದಿ ಸೌದಿ ಅರೇಬಿಯಾದಲ್ಲಿ ಹುಟ್ಟಿ ಬೆಳೆದರೂ ಪಾಶ್ಚಿಮಾತ್ಯ ಶಿಕ್ಷಣವನ್ನು ಪಡೆದಿದ್ದಾರೆ. ನ್ಯೂಯಾರ್ಕ್‌ನ ಸಿರಾಕ್ಯೂಸ್ ವಿಶ್ವವಿದ್ಯಾಲಯದಲ್ಲಿ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದ್ದಾರೆ.
ಯುವರಾಜ ಹುಸೇನ್ ಬಿನ್ ಅಬ್ದುಲ್ಲಾ ಹಾಗೂ ರಾಜ್ವಾ ಅಲ್ ಸೈಫ್ ವೆಡ್ಡಿಂಗ್ ಮೋಟಾರು ಕೇಡ್:ಇತರ ಗಮನಾರ್ಹ ಅತಿಥಿಗಳಲ್ಲಿ ನೆದರ್‌ಲ್ಯಾಂಡ್‌ನ ರಾಜ ವಿಲ್ಲೆಮ್-ಅಲೆಕ್ಸಾಂಡರ್ ಮತ್ತು ರಾಣಿ ಮ್ಯಾಕ್ಸಿಮಾ, ಹಾಗೆಯೇ ಬೆಲ್ಜಿಯಂನ ರಾಜ ಫಿಲಿಪ್ ಮತ್ತು ಕ್ರೌನ್ ಪ್ರಿನ್ಸೆಸ್ ಎಲಿಜಬೆತ್ ಮತ್ತು ಡ್ಯಾನಿಶ್ ಕ್ರೌನ್ ಪ್ರಿನ್ಸ್ ಫ್ರೆಡೆರಿಕ್ ಮತ್ತು ಕ್ರೌನ್ ಪ್ರಿನ್ಸೆಸ್ ಮೇರಿ ಭಾಗಿಯಾಗಿದ್ದರು. ಜೋರ್ಡಾನ್‌ನಾದ್ಯಂತ ದಂಪತಿಗಳು ಈ ಸಂದರ್ಭಕ್ಕಾಗಿ ಅಲಂಕರಿಸಲಾದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆ ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು.
ವಿಶೇಷ ಸಂದರ್ಭಗಳಲ್ಲಿ ಕಾಯ್ದಿರಿಸಿದ ರಾಯಲ್ ರೆಡ್ ಮೋಟಾರುಕೇಡ್ ರಾಜಧಾನಿಯ ಮಧ್ಯದಲ್ಲಿರುವ ಜಹ್ರಾನ್ ಅರಮನೆಯಿಂದ ಪಶ್ಚಿಮದಲ್ಲಿ ಹುಸೇನಿಯಾ ಅರಮನೆಗೆ ತಲುಪಿತು. "ನಾವು ರಾಜಕುಮಾರನ ವಿವಾಹದಿಂದ ಖಂಡಿತವಾಗಿಯೂ ತುಂಬಾ ಸಂತೋಷವಾಗಿದ್ದೇವೆ. ಇದು ಜೋರ್ಡಾನ್‌ನ ಎಲ್ಲಾ ಸಂತೋಷವಾಗಿದೆ" ಸಾವ್ಸನ್ ರಿಫಾಯಾ ಹೇಳಿದರು.
ಹುಸೇನ್ ಬಿನ್ ಅಬ್ದುಲ್ಲಾ ಹಾಗೂ ರಾಜ್ವಾ ಅಲ್ ಸೈಫ್ ಅದ್ದೂರಿ ವಿವಾಹ ಸಮಾರಂಭ ಜೋರ್ಡಾನ್ ತನ್ನ ಮಧ್ಯಪ್ರಾಚ್ಯ ನೆರೆಹೊರೆಯವರೊಂದಿಗೆ ಹೋಲಿಸಿದರೆ ಸಾಪೇಕ್ಷ ಸ್ಥಿರತೆಯನ್ನು ಹೊಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು ದೇಶದಲ್ಲಿ ಅನೇಕ ಪ್ರತಿಭಟನೆಗಳು ನಡೆದಿವೆ. ಜೋರ್ಡಾನ್ ಹೆಚ್ಚು ಸಾಲದಲ್ಲಿದೆ ಮತ್ತು ಶೇ.23 ರಷ್ಟು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ದೇಶವು ವಿದೇಶಿ ನೆರವಿನ ಮೇಲೆ ವ್ಯಾಪಕವಾಗಿ ಅವಲಂಬಿತವಾಗಿದೆ.
ಜೋರ್ಡಾನ್ ರಾಜ 11 ಮಿಲಿಯನ್ ಜನರನ್ನು ಹೊಂದಿರುವ ರಾಷ್ಟ್ರದಲ್ಲಿ ವ್ಯಾಪಕವಾದ ರಾಜಕೀಯ ಅಧಿಕಾರವನ್ನು ಹೊಂದಿದ್ದಾನೆ. ಸಂಸದೀಯ ರಾಜಪ್ರಭುತ್ವ ಮತ್ತು ಅವನು ಸಶಸ್ತ್ರ ಪಡೆಗಳ ಸರ್ವೋಚ್ಚ ನಾಯಕನೂ ಆಗಿದ್ದಾನೆ. ಬ್ರಿಟನ್‌ನ ರಾಯಲ್ ಮಿಲಿಟರಿ ಅಕಾಡೆಮಿ ಸ್ಯಾಂಡ್‌ಹರ್ಸ್ಟ್‌ಗೆ ಹಾಜರಾಗುವ ಮೂಲಕ ಹುಸೇನ್ ತನ್ನ ತಂದೆಯ ಹಾದಿಯನ್ನೇ ತುಳಿದಿದ್ದಾರೆ. ಅವರು ವಾಷಿಂಗ್ಟನ್‌ನ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದ್ದಾರೆ.
ಇದನ್ನೂ ಓದಿ:ಕತಾರ್ ಪ್ರಧಾನಿ, ತಾಲಿಬಾನ್ ಮಧ್ಯೆ ಅಫ್ಘಾನಿಸ್ತಾನದಲ್ಲಿ ರಹಸ್ಯ ಮಾತುಕತೆ