ಹೈದರಾಬಾದ್: ಜನ ಅತಿ ಹೆಚ್ಚು ಭಯಪಡುವ ಸರೀಸೃಪವೆಂದರೆ ಅದು ಹಾವು. ಆದರೆ ಭೂಮಿಯ ಮೇಲಿರುವ 600 ವಿಷಕಾರಿ ಹಾವುಗಳ ಪೈಕಿ ಕೇವಲ 200 ಮಾತ್ರ ಮಾನವರಿಗೆ ಮಾರಣಾಂತಿಕವಾಗಿವೆ. ಇಂಥ ಅತ್ಯಂತ ವಿಷಪೂರಿತ ಹಾವುಗಳ ಪೈಕಿ ಇನ್ಲ್ಯಾಂಡ್ ತೈಪಾನ್ ಕೂಡ ಒಂದು.
ಫೀಯರ್ಸ್ ಸ್ನೇಕ್ ಎಂದೂ ಕರೆಯಲ್ಪಡುವ ಈ ಹಾವು ಮುಖ್ಯವಾಗಿ ಆಸ್ಟ್ರೇಲಿಯಾದಲ್ಲಿ ಜಾಸ್ತಿ ಕಂಡುಬರುತ್ತದೆ. ಈ ಹಾವುಗಳು ಸಾಮಾನ್ಯವಾಗಿ ಮಧ್ಯಮದಿಂದ ದೊಡ್ಡ ಗಾತ್ರದ್ದಾಗಿದ್ದು, ಚೌಕಾಕಾರದ ತಲೆಯನ್ನು ಹೊಂದಿರುತ್ತವೆ. ಆಸ್ಟ್ರೇಲಿಯಾ ಮ್ಯೂಸಿಯಂ ಪ್ರಕಾರ ಈ ಹಾವುಗಳು ದಿನದ ಆರಂಭದಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಮರಳಿ ಗೂಡಿಗೆ ಹೋಗುವ ಮುನ್ನ ಇವು ನೆಲದ ಬಿರುಕುಗಳಲ್ಲಿ ಹೋಗುವುದು ಕಂಡು ಬರುತ್ತದೆ.
ಈ ಹಾವಿನ ವಿಷದ ಬಗ್ಗೆ ಹೇಳುವುದಾದರೆ, ಇನ್ಲ್ಯಾಂಡ್ ತೈಪಾನ್ ಅತ್ಯಂತ ಮಾರಣಾಂತಿಕ ಹಾವುಗಳ ಪಟ್ಟಿಯಲ್ಲಿ 1 ನೇ ಸ್ಥಾನದಲ್ಲಿದೆ. ಹಾವಿನ ವಿಷವನ್ನು LD50 ವಿಷಕಾರಿ ಪ್ರಮಾಣದಲ್ಲಿ ಅಳೆಯಲಾಗುತ್ತದೆ. ಇದು ಹಾನಿಯನ್ನುಂಟುಮಾಡುವ ವಿಷದ ಸಾಮರ್ಥ್ಯವನ್ನು ನಿರ್ಧರಿಸುತ್ತದೆ.