ಕೀವ್ (ಉಕ್ರೇನ್): ನೀರಲ್ಲಿ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಎನ್ನುವಂತೆ ಯುದ್ಧ ಪೀಡಿತ ಉಕ್ರೇನ್ನಲ್ಲಿ ಅಚ್ಚರಿ ಎಂಬಂತೆ ಯೋಧನೊಬ್ಬನ ಪ್ರಾಣವನ್ನು ಮೊಬೈಲ್ ಫೋನ್ ಉಳಿಸಿದೆ. ರಷ್ಯಾ ಸೇನೆ ಮಾಡಿದ ದಾಳಿ ವೇಳೆ ಯೋಧನ ಬಳಿಯಿದ್ದ ಮೊಬೈಲ್ಗೆ ಬುಲೆಟ್ ತಾಗಿದ್ದು, 'ಈ ಸ್ಮಾರ್ಟ್ಫೋನ್ ನನ್ನ ಜೀವ ಉಳಿಸಿದೆ' ಎಂದು ಸೈನಿಕ ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಫೆ.24ರಿಂದಲೂ ರಷ್ಯಾ ಮತ್ತು ಉಕ್ರೇನ್ ನಡುವೆ ಘೋರ ಯುದ್ಧ ನಡೆಯುತ್ತಿದೆ. ಈ ನಡುವೆ ಉಕ್ರೇನ್ ಸೈನಿಕರ ಮೇಲೆ ರಷ್ಯಾ ಸೇನೆ ದಾಳಿ ಮಾಡಿದ್ದು, 7.62 ಎಂಎಂ ಬುಲೆಟ್ ಉಕ್ರೇನ್ ಸೈನಿಕನ ಫೋನ್ನಲ್ಲೇ ಉಳಿದುಕೊಂಡಿದೆ. ಬುಲೆಟ್ ತಾಗಿದ ಫೋನ್ ತೋರಿಸುತ್ತಲೇ ಯೋಧ ವಿಡಿಯೋದಲ್ಲಿ ಮಾತನಾಡಿ ಈ 'ಸ್ಮಾರ್ಟ್ಫೋನ್ ನನ್ನ ಜೀವ ಉಳಿಸಿದೆ' ಎಂದು ಹೇಳುತ್ತಾನೆ. ಅಲ್ಲದೇ, ತನ್ನ ಜೊತೆಗಿದ್ದ ಇತರ ಸೈನಿಕರೊಂದಿಗೆ ಸಹ ಮಾತನಾಡಿದ್ದು, ವಿಡಿಯೋದಲ್ಲಿ ಗುಂಡಿನ ಸದ್ದು ಸಹ ಕೇಳಿಸುತ್ತಿದೆ.