ಮೊಗಾದಿಶು : ಸೊಮಾಲಿಯಾ ರಾಷ್ಟ್ರೀಯ ಸೇನಾ ಪಡೆಯು (ಎಸ್‌ಎನ್‌ಎ) ದನಾಬ್ ಎಂಬಲ್ಲಿ 40 ಅಲ್-ಶಬಾಬ್ ಉಗ್ರಗಾಮಿಗಳನ್ನು ಹತ್ಯೆಗೈದಿದೆ ಎಂದು ಅಧಿಕಾರಿಗಳು ಭಾನುವಾರ ಖಚಿತಪಡಿಸಿದ್ದಾರೆ. ದಕ್ಷಿಣ ಸೊಮಾಲಿಯಾದ ಕೆಳ ಜುಬಾ ಪ್ರದೇಶದಲ್ಲಿ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದರನ್ನು ಹೊಡೆದುರುಳಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸೊಮಾಲಿಯಾ ರಕ್ಷಣಾ ಸಚಿವ ಅಬ್ದುಲ್ಕದಿರ್ ಮೊಹಮ್ಮದ್ ನೂರ್, "ಮಧ್ಯ ಮತ್ತು ದಕ್ಷಿಣ ಸೊಮಾಲಿಯಾದಲ್ಲಿ ಅಲ್-ಖೈದಾ-ಸಂಬಂಧಿತ ಉಗ್ರಗಾಮಿಗಳ ವಿರುದ್ಧ ವೈಮಾನಿಕ ದಾಳಿ ಮತ್ತು ಜಂಟಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಅಲ್-ಶಬಾಬ್ ಉಗ್ರಗಾಮಿಗಳನ್ನು ತಟಸ್ಥಗೊಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ. ನಲ್ವತ್ತು ಉಗ್ರಗಾಮಿಗಳನ್ನು ಹತ್ಯೆಗೈಯ್ಯಲಾಗಿದೆ" ಎಂದಿದ್ದಾರೆ. ಆದ್ರೆ, ಸೇನೆಯ ಕಡೆಯಿಂದ ಸಾವು-ನೋವುಗಳು ಸಂಭವಿಸಿವೆಯೇ ಎಂಬುದರ ಕುರಿತು ಅವರು ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ :ಸೊಮಾಲಿಯಾದಲ್ಲಿ ಕಾರ್ ಬಾಂಬ್ ಸ್ಫೋಟಿಸಿ 8 ಜನರ ಕೊಂದ ಅಲ್ ಖೈದಾ ಬೆಂಬಲಿತ ಉಗ್ರರು