ಕೀವ್(ಉಕ್ರೇನ್): ರಷ್ಯಾ ಸೇನೆಯು ಉಕ್ರೇನ್ನಲ್ಲಿ ಮತ್ತಷ್ಟು ಭೀಕರ ದಾಳಿ ನಡೆಸುತ್ತಿದೆ. ನಾಗರಿಕರ ಸ್ಥಳಾಂತರಕ್ಕೆ ಬಳಸುತ್ತಿದ್ದ ರೈಲ್ವೆ ನಿಲ್ದಾಣದ ಮೇಲೂ ಇಂದು ಭೀಕರ ರಾಕೆಟ್ ದಾಳಿ ಮಾಡಿದೆ. ಪರಿಣಾಮ, 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್ನ ರೈಲ್ವೆ ನಿಲ್ದಾಣದ ಮೇಲೆ ರಷ್ಯಾ ರಾಕೆಟ್ ದಾಳಿ: 30ಕ್ಕೂ ಹೆಚ್ಚು ಜನರ ಸಾವು - ಉಕ್ರೇನ್ ಮೇಲೆ ರಷ್ಯಾ ರಾಕೆಟ್ ದಾಳಿ
ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಬಳಸುತ್ತಿದ್ದ ರೈಲು ನಿಲ್ದಾಣದ ಮೇಲೆ ರಷ್ಯಾ ಸೇನೆಯು ರಾಕೆಟ್ ದಾಳಿ ಮಾಡಿದೆ.
ಕ್ರಾಮಾಟೋರ್ಸ್ಕ್ ರೈಲ್ವೆ ನಿಲ್ದಾಣವನ್ನು ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಬಳಸಲಾಗುತ್ತಿತ್ತು. ಹೀಗಾಗಿ ಈ ನಿಲ್ದಾಣದಲ್ಲಿ ನೂರಾರು ಜನರು ಸೇರಿದ್ದರು. ಈ ವೇಳೆ ರಷ್ಯಾ ಸೇನೆಯು ರಾಕೆಟ್ ದಾಳಿ ಮಾಡಿದೆ ಎಂದು ಉಕ್ರೇನ್ನ ಡೊನೆಟ್ಸ್ಕ್ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಪಾವ್ಲೋ ಕೈರಿಲೆಂಕೊ ತಿಳಿಸಿದ್ದಾರೆ. ಅಲ್ಲದೇ, ರಷ್ಯಾ ಸೇನೆಯು ಜನರನ್ನು ಆತಂಕ, ಭಯಭೀತರನ್ನಾಗಿಸುತ್ತಿದೆ. ಹಲವಾರು ನಾಗರಿಕರನ್ನು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಒತ್ತೆ ಇಟ್ಟುಕೊಳ್ಳಲು ಬಯಸುತ್ತಿದೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ:ಅಮೆರಿಕ ಗುಪ್ತಚರ ಸಂಸ್ಥೆ ಪ್ರವೇಶಿಸಲು ಯತ್ನಿಸಿದ ಪಾಕ್ ಐಎಸ್ಐ ಗೂಢಾಚಾರಿಗಳ ಬಂಧನ