ಕರ್ನಾಟಕ

karnataka

ETV Bharat / international

ಇಸ್ರೇಲ್​ನಲ್ಲಿ ಮತ್ತೆ ಕಾಲ್ತುಳಿತ: 45 ಜನರ ಬಲಿ ಪಡೆದ ಧಾರ್ಮಿಕ ಕಾರ್ಯಕ್ರಮ

ಇಸ್ರೇಲ್​ನಲ್ಲಿ ನಡೆದ ಲಾಗ್ ಬಾಒಮೆರ್ ಧಾರ್ಮಿಕ ಕಾರ್ಯಕ್ರಮದಲ್ಲಿ ಮತ್ತೆ ಕಾಲ್ತುಳಿತ ಸಂಭವಿಸಿದ್ದು, 10 ಮಕ್ಕಳು ಸೇರಿ ಸುಮಾರು 45 ಮಂದಿ ಸಾವನ್ನಪ್ಪಿದ್ದಾರೆ.

By

Published : May 2, 2021, 12:28 PM IST

Israel
ಇಸ್ರೇಲ್​ನಲ್ಲಿ ಮತ್ತೆ ಕಾಲ್ತುಳಿತ

ಜೆರುಸಲೆಂ (ಇಸ್ರೇಲ್​):ಲಾಗ್ ಬಾಒಮೆರ್ ಪವಿತ್ರ ದಿನವು ಇಸ್ರೇಲ್​ನ ಅಲ್ಟ್ರಾ-ಆರ್ಥೊಡಾಕ್ಸ್ ಸಮುದಾಯದ ಅತ್ಯಂತ ಸಂತೋಷದಾಯಕ ದಿನಗಳಲ್ಲಿ ಒಂದು. ಆದರೆ ಈ ಧಾರ್ಮಿಕ ಆಚರಣೆ ವೇಳೆ ಕಾಲ್ತುಳಿತ ಸಂಭವಿಸಿದ್ದು, 10 ಮಕ್ಕಳು ಸೇರಿ ಸುಮಾರು 45 ಮಂದಿ ಸಾವನ್ನಪ್ಪಿದ್ದಾರೆ.

ಇಸ್ರೇಲ್​ನಲ್ಲಿ ಯಶಸ್ವಿ ವ್ಯಾಕ್ಸಿನೇಶನ್​ ನಡೆದ ಸಂತಸದಲ್ಲಿದ್ದ ಜನರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ ಜನಸಂಖ್ಯೆ ಮಿತಿ ಮೀರಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು, ಅಮೆರಿಕ, ಕೆನಡಾ, ಅರ್ಜೆಂಟೀನಾ ಸೇರಿ ಇಸ್ರೇಲ್​ನ 45 ಮಂದಿ ಸಾವನ್ನಪ್ಪಿದ್ದಾರೆ.

ಈ ಆಚರಣೆ ವೇಳೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಭದ್ರತಾ ಇಲಾಖೆ ಸೂಚನೆ ನೀಡಿದ್ದರೂ ಸಹ ಬೇಜವಾಬ್ದಾರಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಧಾನಿ ಬೆಂಜಮಿನ್​ ನೆತನ್ಯಾಹು ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆದರೆ ನೆತನ್ಯಾಹು ಇಂದು ರಾಷ್ಟ್ರೀಯ ಶೋಕಾಚರಣೆಯ ದಿನವೆಂದು ಘೋಷಿಸಿದ್ದಾರೆ.

ಇದನ್ನು ಓದಿ: ಇಸ್ರೇಲ್​ನಲ್ಲಿ ಕಾಲ್ತುಳಿತಕ್ಕೆ 40 ಮಂದಿ ಬಲಿ; 103 ಜನರಿಗೆ ಗಾಯ

ಇಸ್ರೇಲ್​ನ ಮೌಂಟ್​ ಮೆರಾನ್​ನಲ್ಲಿ ಈ ಧಾರ್ಮಿಕ ಆಚರಣೆ ಏರ್ಪಡಿಸಲಾಗಿತ್ತು. ಈ ವರ್ಷದಲ್ಲಿ ಈವರೆಗೆ ನಡೆದ ಅತಿ ದೊಡ್ಡ ಕೂಟ ಇದಾಗಿದ್ದು, ಸುಮಾರು 1 ಲಕ್ಷ ಮಂದಿ ಆಗಮಿಸಿದ್ದರು.

ಕಾಲ್ತುಳಿತಕ್ಕೆ ಒಳಗಾಗಿದ್ದ ಜನರನ್ನು ಹೊರ ತೆಗೆಯಲು ಸುಮಾರು 40 ನಿಮಿಷಗಳ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಅಷ್ಟೇ ಅಲ್ಲದೆ, ಮೃತರನ್ನು ಗುರುತಿಸಲು ಕುಟುಂಬಸ್ಥರು ಕಣ್ಣೀರಿನಲ್ಲೇ ಪರದಾಡಿದ ದೃಶ್ಯ ಮನ ಕಲಕುವಂತಿತ್ತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ABOUT THE AUTHOR

...view details