ಕರ್ನಾಟಕ

karnataka

ETV Bharat / international

ಹೌತಿ ಬಂಡುಕೋರರಿಂದ ಡ್ರೋನ್ ದಾಳಿ.. ನಾಲ್ವರು ಯೆಮೆನ್ ಯೋಧರ ಸಾವು

ಹದ್ರಾಮೌಟ್‌ನ ಅಲ್-ವಾಡಿಯಾ ಗಡಿಯಲ್ಲಿ ಹೊಸದಾಗಿ ನೇಮಕಗೊಂಡ ಸರ್ಕಾರಿ ಪರ ಯೆಮೆನ್ ಪಡೆಗಳ ಮಿಲಿಟರಿ ನೆಲೆಯಲ್ಲಿ ಶನಿವಾರ ತಡರಾತ್ರಿ ಹೌತಿ ಡ್ರೋನ್‌ಗಳು ಬಾಂಬ್ ಸ್ಫೋಟಿಸಿವೆ ಎಂದು ತಿಳಿದುಬಂದಿದೆ. ಇದರಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದಾರೆ.

By

Published : Jun 20, 2021, 7:42 PM IST

Yemeni soldiers
ಯೆಮೆನ್​​ ಸೇನೆಯ ನಾಲ್ವರು ಯೋಧರು ಸಾವು

ಸನಾ (ಯೆಮನ್): ಆಗ್ನೇಯ ಪ್ರಾಂತ್ಯದ ಹದ್ರಾಮೌಟ್‌ನಲ್ಲಿ ಸರ್ಕಾರದ ಮಿಲಿಟರಿ ನೆಲೆಯ ಮೇಲೆ ‘ಹೌತಿ’ (ಬಂಡುಕೋರರ ತಂಡ) ಡ್ರೋನ್ ದಾಳಿ ನಡೆಸಿದ್ದು, ಹೊಸದಾಗಿ ನೇಮಕಗೊಂಡ ನಾಲ್ವರು ಯೆಮೆನ್ ಸೈನಿಕರು ಮೃತಪಟ್ಟಿದ್ದಾರೆ ಮತ್ತು 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಸನಾ ಮೂಲದ ಹೌತಿ ಬಂಡುಕೋರರು ಈವರೆಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

ಹದ್ರಾಮೌಟ್‌ನ ಅಲ್-ವಾಡಿಯಾ ಗಡಿಯಲ್ಲಿ ಹೊಸದಾಗಿ ನೇಮಕಗೊಂಡ ಸರ್ಕಾರಿ ಪರ ಯೆಮೆನ್ ಪಡೆಗಳ ಮಿಲಿಟರಿ ನೆಲೆಯಲ್ಲಿ ಶನಿವಾರ ತಡರಾತ್ರಿ ಹೌತಿ ಡ್ರೋನ್‌ಗಳು ಬಾಂಬ್ ಸ್ಫೋಟಿಸಿವೆ ಎಂದು ತಿಳಿದುಬಂದಿದೆ.

ಹಲವಾರು ಕಾರಣಗಳಿಂದ 2014 ರಲ್ಲಿ ಅಂತರ್​ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಅಬ್ದುಲ್-ರಬ್ಬು ಮನ್ಸೂರ್ ಹಾಡಿ ಸರ್ಕಾರವನ್ನು ವಜಾಗೊಳಿಸಲಾಯಿತು. ಅಂದಿನಿಂದ ಯೆಮೆನ್ ಅಂತರ್ಯುದ್ಧದಲ್ಲಿ ಸಿಲುಕಿದೆ. ಹಾಡಿ ಸರ್ಕಾರವನ್ನು ಬೆಂಬಲಿಸಲು 2015 ರ ಮಾರ್ಚ್​ನಲ್ಲಿ ಸೌದಿ ನೇತೃತ್ವದ ಅರಬ್ ಒಕ್ಕೂಟವು ಯೆಮೆನ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿತು.

ABOUT THE AUTHOR

...view details