ನ್ಯೂಯಾರ್ಕ್, ಅಮೆರಿಕ:2015ರಲ್ಲಿ ಯೆಮೆನ್‌ನಲ್ಲಿ ಸಂಘರ್ಷ ಆರಂಭವಾದ ನಂತರ ಕನಿಷ್ಠ 10 ಸಾವಿರ ಮಕ್ಕಳು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ವಕ್ತಾರ ಜೇಮ್ಸ್ ಎಲ್ಡರ್ ಮಂಗಳವಾರ ಹೇಳಿದರು.
"ಯೆಮೆನ್ ಸಂಘರ್ಷ ನಾಚಿಕೆಗೇಡು. ಮಾರ್ಚ್ 2015ರಲ್ಲಿ ಸಂಘರ್ಷ ಆರಂಭವಾದಾಗಿನಿಂದ ಪ್ರತಿದಿನ ನಾಲ್ಕು ಮಕ್ಕಳ ಸರಾಸರಿಯಲ್ಲಿ ಸುಮಾರು 10 ಸಾವಿರ ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಎಲ್ಡರ್ ಹೇಳಿದ್ದಾರೆ.
ಹಿಂಸಾತ್ಮಕ ಸಂಘರ್ಷ, ಆರ್ಥಿಕ ಸಂಕಷ್ಟ, ಸಿಗದ ಮೂಲಭೂತ ಸೇವೆಗಳು ಮತ್ತು ನೆರವು ನೀಡಲು ವಿಶ್ವಸಂಸ್ಥೆ ನಿರಾಸಕ್ತಿ ವಹಿಸಿದ್ದು ಯೆಮೆನ್ ಈ ಹಂತಕ್ಕೆ ಬರಲು ಕಾರಣ ಎಂದು ಎಲ್ಡರ್ ವಿವರಿಸಿದ್ದಾರೆ