ಕರ್ನಾಟಕ

karnataka

ETV Bharat / international

ಇರಾನ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ವಿಸ್ತರಿಸಲು ಗಲ್ಫ್​​ನ 6 ರಾಷ್ಟ್ರಗಳಿಂದ ಅನುಮೋದನೆ

ಇರಾನ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧವನ್ನು ವಿಸ್ತರಿಸಲು ಗಲ್ಫ್​ ಅರಬ್ ರಾಷ್ಟ್ರಗಳ ಆರು ರಾಷ್ಟ್ರಗಳ ಗುಂಪು ಅನುಮೋದನೆ ನೀಡಿದ್ದು, ವಿಶ್ವಸಂಸ್ಥೆಗೆ ಪತ್ರ ಬರೆದಿವೆ.

By

Published : Aug 10, 2020, 2:50 PM IST

6 Gulf Arab countries back extending UN arms embargo on Iran
ಇರಾನ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ

ದುಬೈ:ಆಂತರಿಕ ಕಲಹದಿಂದ ಗಲ್ಫ್ ಅರಬ್ ರಾಷ್ಟ್ರಗಳ ಆರು ರಾಷ್ಟ್ರಗಳ ಗುಂಪು ಇರಾನ್ ಮೇಲೆ ವಿಶ್ವಸಂಸ್ಥೆಯು ಶಸ್ತ್ರಾಸ್ತ್ರ ನಿರ್ಬಂಧವನ್ನು ವಿಸ್ತರಿಸಲು ಅನುಮೋದನೆ ನೀಡಿದೆ.

ಶಸ್ತ್ರಾಸ್ತ್ರ ನಿರ್ಬಂಧವನ್ನು ವಿಸ್ತರಿಸುವುದನ್ನು ಬೆಂಬಲಿಸಿ ಗಲ್ಫ್ ಕೋ-ಆಪರೇಷನ್ ಕೌನ್ಸಿಲ್ ಭಾನುವಾರ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್​ಗೆ ಪತ್ರವೊಂದನ್ನು ಕಳುಹಿಸಿದೆ. ಅದು ಇರಾನ್ ದೇಶವು ಫೈಟರ್ ಜೆಟ್, ಟ್ಯಾಂಕ್ ಮತ್ತು ಯುದ್ಧನೌಕೆಗಳಂತಹ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಖರೀದಿಸುವುದನ್ನು ತಡೆಯುತ್ತದೆ.

ಗಲ್ಫ್ ಕೋ-ಆಪರೇಷನ್ ಕೌನ್ಸಿಲ್ ಬಹ್ರೇನ್, ಕುವೈತ್, ಒಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಒಳಗೊಂಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್, ಇರಾನ್ ನೆರೆಯ ರಾಷ್ಟ್ರಗಳಲ್ಲಿ ಸಶಸ್ತ್ರ ಹಸ್ತಕ್ಷೇಪದಿಂದ ನೇರವಾಗಿ ಅಥವಾ ಇರಾನ್ ಶಸ್ತ್ರಸಜ್ಜಿತ ಮತ್ತು ತರಬೇತಿ ಪಡೆದ ಸಂಘಟನೆಗಳು ಮತ್ತು ಚಳವಳಿಗಳಿಂದ ದೂರವಿರಲಿಲ್ಲ ಎಂದು ಆರೋಪಿಸಿದೆ.

ಸೌದಿ ನೇತೃತ್ವದ ಒಕ್ಕೂಟವು ಯೆಮನ್‌ನ ಹೌತಿ ಬಂಡುಕೋರರ ವಿರುದ್ಧ ಹೋರಾಡುತ್ತಲೇ ಇದೆ. ಈ ಬಂಡುಕೋರರು ಇರಾನ್‌ನಿಂದ ಶಸ್ತ್ರಾಸ್ತ್ರಗಳನ್ನು ಪಡೆದಿದ್ದಾರೆ ಎಂದು ವಿಶ್ವಸಂಸ್ಥೆ, ಅಮೆರಿಕ ಮತ್ತು ಶಸ್ತ್ರಾಸ್ತ್ರ ತಜ್ಞರು ಆರೋಪಿಸಿದ್ದಾರೆ. ಯೆಮನ್‌ನಲ್ಲಿ ಇರಾನ್​ನ ಶಸ್ತ್ರಾಸ್ತ್ರಗಳು ಪದೇ ಪದೆ ಕಂಡುಬರರುತ್ತಿವೆ. ಹೀಗಿದ್ದರೂ ಇರಾನ್ ಮಾತ್ರ ಹೌತಿಗಳಿಗೆ ಶಸ್ತ್ರಾಸ್ತ್ರ ಪೂರೈಸುತ್ತಿರುವ ಆರೋಪವನ್ನು ನಿರಾಕರಿಸುತ್ತಿದೆ.

ಇರಾನ್, ಲೆಬನಾನ್ ಮತ್ತು ಸಿರಿಯಾದಲ್ಲಿ ಹಿಜ್ಬೊಲ್ಲಾ ಹೋರಾಟಗಾರರನ್ನು ಶಸ್ತ್ರಸಜ್ಜಿತಗೊಳಿಸುತ್ತಿದೆ ಮತ್ತು ಇರಾಕ್​ನ ಶಿಯಾ ಸೇನಾಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ABOUT THE AUTHOR

...view details