ಕರ್ನಾಟಕ

karnataka

ವಿಶ್ವ ಆರೋಗ್ಯ ಸಂಸ್ಥೆ ತಂಡಕ್ಕೆ ವುಹಾನ್​​ ಪ್ರವೇಶ ನಿರಾಕರಿಸಿದ ಚೀನಾ!

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಗೆಬ್ರಿಯೇಸಸ್, ಚೀನಾ ಇನ್ನೂ ತಜ್ಞರ ಪ್ರವೇಶದ ವಿಚಾರವನ್ನು ಅಂತಿಮಗೊಳಿಸಿಲ್ಲದಿರುವುದು ಅತೃಪ್ತಿ ತಂದಿದೆ ಎಂದಿದ್ದಾರೆ.

By

Published : Jan 6, 2021, 3:18 PM IST

Published : Jan 6, 2021, 3:18 PM IST

WHO
ಟೆಡ್ರೋಸ್ ಗೆಬ್ರಿಯೇಸಸ್

ಜಿನೇವಾ (ಸ್ವಿಟ್ಜರ್​ಲ್ಯಾಂಡ್​):ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್​ನ ಮೂಲದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದು, ಡಬ್ಲ್ಯೂಹೆಚ್​ಒ ತಂಡ ವುಹಾನ್ ನಗರಕ್ಕೆ ಭೇಟಿ ನೀಡಲು ಚೀನಾ ನಿರಾಕರಿಸಿದೆ.

ಇಬ್ಬರು ಸದಸ್ಯರು ಪ್ರಯಾಣ ಬೆಳೆಸಿದ್ದು, ಒಬ್ಬರು ಹಿಂದೆ ಸರಿದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ವೀಸಾ ವಿಚಾರದಲ್ಲಿ ಸಮಸ್ಯೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೊಂಡಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಗೆಬ್ರಿಯೇಸಸ್, ಚೀನಾ ಇನ್ನೂ ತಜ್ಞರ ಪ್ರವೇಶದ ವಿಚಾರವನ್ನು ಅಂತಿಮಗೊಳಿಸಿಲ್ಲದಿರುವುದು ಅತೃಪ್ತಿ ತಂದಿದೆ ಎಂದಿದ್ದಾರೆ.

ಇದನ್ನೂ ಓದಿ:ಹೊಸ ಅಭಿವೃದ್ಧಿ ಗುರಿಗಳನ್ನು ರೂಪಿಸಲು ಹೊಸ ಕಾಂಗ್ರೆಸ್ ತೆರೆದ ಉ.ಕೊರಿಯಾ

ಕೆಲವು ತಿಂಗಳುಗಳ ಮಾತುಕತೆಯ ನಂತರ ಡಿಸೆಂಬರ್​ನಲ್ಲಿ ಕೊರೊನಾ ವೈರಸ್ ಮೂಲದ ಬಗ್ಗೆ ತನಿಖೆ ಮಾಡಲು ಒಪ್ಪಿಗೆ ನೀಡಿತ್ತು. ಇದೊಂದು ದೀರ್ಘಕಾಲದ ತನಿಖೆಯಾಗಿದ್ದು, ಸಾಕಷ್ಟು ನಿರೀಕ್ಷೆಗಳಿದ್ದವು.

ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇಬ್ಬರು ತಜ್ಞರ ತಂಡವನ್ನು ಚೀನಾಗೆ ಕಳಿಸಲು ಮುಂದಾಗಿದ್ದು, ಈಗ ಚೀನಾ ಆ ತಂಡ ವುಹಾನ್​​ಗೆ ಪ್ರವೇಶಿಸಲು ನಿರ್ಬಂಧ ಹೇರಿದೆ ಎಂದು ಬಿಬಿಸಿ ವರದಿ ಮಾಡಿದೆ.

2019ರ ಅಂತ್ಯದಲ್ಲಿ ಚೀನಾದ ವುಹಾನ್ ನಗರದ ಮಾರುಕಟ್ಟೆಯೊಂದರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಅಲ್ಲಿಂದಲೇ ವಿಶ್ವದಾದ್ಯಂತ ಹರಡಿತ್ತು ಎಂಬ ವಾದವನ್ನು ಚೀನಾ ನಿರಾಕರಿಸಿತ್ತು.

ABOUT THE AUTHOR

...view details