ಬರ್ಲಿನ್: ಕೋವಿಡ್ ಮೂಲ ಪತ್ತೆ ಹಚ್ಚುವಾಗ ಚೀನಾ ಪಾರದರ್ಶಕವಾಗಿರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಧಾನಮ್ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಚೀನಾಗೆ ಪ್ರಯಾಣಿಸಿದ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡಕ್ಕೆ ಕೋವಿಡ್ ಮೂಲವನ್ನು ಪತ್ತೆ ಹಚ್ಚುವುದು ಒಂದು ಸವಾಲಾಗಿತ್ತು. ಚೀನಾದ ವುಹಾನ್ನಲ್ಲಿ ಮೊದಲ ಕೋವಿಡ್ ಪ್ರಕರಣ ದಾಖಲಾಗಿತ್ತು.
ಕೋವಿಡ್ ಮೂಲ ಪತ್ತೆ ಹಚ್ಚಲು ಚೀನಾ ಪಾರದರ್ಶಕತೆ ಜತೆಗೆ ಮುಕ್ತ ಸಹಕಾರ ನೀಡುವಂತೆ ವಿಶ್ವಸಂಸ್ಥೆ ಒತ್ತಾಯಿಸುತ್ತಿದೆ. ವುಹಾನ್ನಲ್ಲಿರುವ ಚೀನಾದ ಸರ್ಕಾರಿ ಪ್ರಯೋಗಾಲಯದಿಂದ ವೈರಸ್ ಹರಡಿರಬಹುದು ಎಂಬುದನ್ನು ತಳ್ಳಿಹಾಕುವುದು ಅಕಾಲಿಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಾನು ಲ್ಯಾಬ್ ಟೆಕ್ನೀಷಿಯನ್, ಇಮ್ಯುನೊಲಾಜಿಸ್ಟ್ ಆಗಿದ್ದೆ. ಅಲ್ಲಿ ನಡೆಯುವ ಅವಘಡಗಳ ಬಗ್ಗೆ ನನಗೆ ಗೊತ್ತಿದೆ ಎಂದಿದ್ದಾರೆ.
ಮೇ ತಿಂಗಳಲ್ಲಿ ಜೋ ಬೈಡನ್ ವೈರಸ್ ಮೂಲದ ಪತ್ತೆ ಹಚ್ಚಲು ಗುಪ್ತಚರ ಪರಿಶೀಲನೆಗೆ ಆದೇಶಿಸಿದ್ರು. ಕೋವಿಡ್ ಮೂಲವನ್ನು ಲ್ಯಾಬ್ಗೆ ಲಿಂಕ್ ಕೊಡುವುದು ರಾಜಕೀಯ ಪ್ರೇರಿತವಾಗಿದೆ. ಇತರ ದೇಶಗಳಲ್ಲೂ ಕೋವಿಡ್ ಏಕಾಏಕಿ ಕಾಣಿಸಿಕೊಳ್ಳುತ್ತಿವೆ ಎಂದು ಟೆಡ್ರೊಸ್ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.