ಮಾಸ್ಕೋ:ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಲು ವಿವಿಧ ದೇಶಗಳು ಲಸಿಕೆ ಕಂಡು ಹಿಡಿಯುತ್ತಿದ್ದು, ಇಲ್ಲಿಯವರೆಗೆ ಯಾವುದೇ ದೇಶ ಅದರಲ್ಲಿ ಯಶಸ್ಸು ಸಾಧಿಸಿಲ್ಲ. ಆದರೆ ಇದರ ಮಧ್ಯೆ ಇದೇ ಮೊದಲ ಬಾರಿಗೆ ಔಷಧಾಲಯಗಳಲ್ಲಿ ಮೊದಲ ಕೋವಿಡ್ ಔಷಧಿ ಮಾರಾಟ ಮಾಡಲು ರಷ್ಯಾ ಅನುಮೋದನೆ ನೀಡಿದೆ.
ಕೋವಿಡ್ ಸೋಂಕು ಹೊಂದಿರುವ ಹೊರ ರೋಗಿಗಳಿಗೆ ಆಂಟಿ ವೈರಸ್ ಕೊರೊನಾ ಔಷಧಿ 'ಕೊರೊನಾವಿರ್' ಔಷಧಾಲಯಗಳಲ್ಲಿ ಸಿಗುವಂತೆ ಮಾಡಲು ರಷ್ಯಾ ಅನುಮೋದನೆ ನೀಡಿದ್ದು, ಮುಂದಿನ ವಾರದಿಂದ ಅದು ಔಷಧಾಲಯಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದೆ.
ಕೊರೊನಾವಿರ್ ಮೇ ತಿಂಗಳಲ್ಲೇ ಎಲ್ಲ ಪ್ರಯೋಗ ಮುಕ್ತಾಯಗೊಳಿಸಿದ್ದು, ರಷ್ಯಾ, ಜಪಾನ್ದಲ್ಲಿ ಕೋವಿಡ್ ಸೋಂಕಿಗಾಗಿ ಇದೇ ಔಷಧಿ ಬಳಕೆ ಮಾಡಲಾಗುತ್ತಿದೆ. ಸೋಂಕಿನಿಂದ ಬಳಲುತ್ತಿದ್ದ 168 ರೋಗಿಗಳ ಮೇಲೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಿದ ಬಳಿಕ ಇದೀಗ ಕೊರೊನಾವಿರ್ಗೆ ಅನುಮೋದನೆ ಸಿಕ್ಕಿದೆ ಎಂದು ಆರ್ ಫಾರ್ಮ್ ಹೇಳಿದೆ.
ಆಸ್ಪತ್ರೆಗಳಲ್ಲಿ ಬಳಕೆ ಮಾಡುವ ಉದ್ದೇಶದಿಂದ ಜುಲೈ ತಿಂಗಳಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಇದೀಗ ಮೊದಲ ಬಾರಿಗೆ ಹೊರ ರೋಗಿಗಳಿಗೆ ನೀಡಲು ಈ ಔಷಧಿ ಫಾರ್ಮಸಿಗಳಲ್ಲಿ ನೀಡಲು ಸಿದ್ದವಾಗಿದೆ.