ಕೀವ್(ಉಕ್ರೇನ್):ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದು, ಉಭಯ ದೇಶಗಳ ಮಧ್ಯೆ ಯುದ್ಧ ನಡೆಯುತ್ತಿದೆ. ಕಳೆದ 9 ದಿನಗಳು ಕಳೆದ್ರೂ ಕೂಡ ಉಕ್ರೇನ್ ಮಾತ್ರ ಯುದ್ಧಭೂಮಿಯಿಂದ ಹಿಂದೆ ಸರಿದಿಲ್ಲ. ಏಟಿಗೆ ತಿರುಗೇಟು ನೀಡುತ್ತಿರುವ ಉಕ್ರೇನ್ ರಷ್ಯಾದ ಬಲಿಷ್ಠ ಶಸ್ತ್ರಸಜ್ಜಿತ ಯುದ್ಧ ಟ್ಯಾಂಕರ್ ಧ್ವಂಸಗೊಳಿಸಿದೆ.
ರಷ್ಯಾ ಯೋಧರಿಗೆ ಸರಿಯಾದ ತಿರುಗೇಟು ನೀಡುತ್ತಿರುವ ಉಕ್ರೇನ್ ಇಲ್ಲಿಯವರೆಗೆ 6 ಸಾವಿರಕ್ಕೂ ಅಧಿಕ ಎದುರಾಳಿ ಸೈನಿಕರ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ. ಇದರ ಮಧ್ಯೆ ರಷ್ಯಾದ ಆಕ್ರಮಣ ತಡೆಯಲು ಅದರ 280 ಯುದ್ಧ ಟ್ಯಾಂಕ್ ನಾಶ ಮಾಡಿದೆ.
ಉಕ್ರೇನಿಯನ್ ಮಿಲಿಟರಿ ಪಡೆಗೆ ಯುಎಸ್ ಒದಗಿಸಿರುವ ಹ್ಯಾಂಡ್ ಹೆಲ್ಡ್ ಟ್ಯಾಂಕ್ ವಿರೋಧಿ ಕ್ಷಿಪಣಿ ಸಹಾಯದಿಂದ ರಷ್ಯಾದ 280 ಶಸ್ತ್ರಸಜ್ಜಿತ ವಾಹನ ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ.ರೇಥಿಯಾನ್ ಮಿಸೈಲ್ಸ್ ಮತ್ತು ಡಿಫೆನ್ಸ್ ಲಾಕ್ಹೀಡ್ ಮಾರ್ಟಿನ್ ಜಂಟಿಯಾಗಿ ಈ ಜಾವೆಲಿನ್ ತಯಾರು ಮಾಡಿದ್ದು, ಎದುರಾಳಿಗಳ ಮೇಲೆ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಈವರೆಗೆ ರಷ್ಯಾದ ಸುಮಾರು 9,166 ಸೈನಿಕರು, 37 ಹೆಲಿಕಾಪ್ಟರ್ಗಳು, 251 ಟ್ಯಾಂಕರ್ಗಳು ಉಕ್ರೇನ್ ದಾಳಿಗೆ ನಾಶವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:'ಯುದ್ಧ ಬೇಡ..' ರಷ್ಯಾ ವಾಹಿನಿಯೊಂದರ ನೇರಪ್ರಸಾರದಲ್ಲೇ ಸಿಬ್ಬಂದಿ ರಾಜೀನಾಮೆ
ಉಕ್ರೇನ್ಗೆ ಬುಲೆಟ್ ಪ್ರೂಫ್ ಜಾಕೆಟ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ 9ನೇ ದಿನಕ್ಕೆ ಕಾಲಿಟ್ಟಿದ್ದು, ವಿವಿಧ ದೇಶಗಳಿಂದ ಉಕ್ರೇನ್ಗೆ ಶಸ್ತ್ರಾಸ್ತ್ರ, ಮಾನವೀಯ ಸಹಾಯ ನೀಡುತ್ತಿದೆ. ಇದೀಗ ಚಿಕ್ಕ ದೇಶ ಉಕ್ರೇನ್ಗೆ ಜಪಾನ್ ಬುಲೆಟ್ ಪ್ರೂಫ್ ಜಾಕೆಟ್ ನೀಡಲು ಮುಂದಾಗಿದೆ.