ಟೋಕಿಯೊ(ಜಪಾನ್): ಜಪಾನ್ನಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ರಷ್ಯಾ, ಪೆರು ಮತ್ತು ಸೌದಿ ಅರೇಬಿಯಾ ಸೇರಿದಂತೆ 14 ದೇಶಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಹೇಳಿದ್ದಾರೆ.
ಜಪಾನ್ ಈಗಾಗಲೇ 70 ಕ್ಕೂ ಹೆಚ್ಚು ದೇಶಗಳ ಪ್ರವೇಶವನ್ನು ನಿಷೇಧಿಸಿದೆ. ಅಲ್ಲದೇ ವಿಶ್ವದ ಇತರೆ ಭಾಗಗಳಿಗೂ ವೀಸಾಗಳನ್ನು ಅಮಾನ್ಯಗೊಳಿಸಿದೆ. 14 ದೇಶಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಲಾಗಿದೆ. ಹಾಗಾಗಿ ಈ ದೇಶಗಳಿಂದ ಬರುವುದಕ್ಕೆ ಮತ್ತು ಅಲ್ಲಿಗೆ ಹೋಗುವುದಕ್ಕೆ ಯಾವುದೇ ಅವಕಾಶವಿಲ್ಲ ಎಂದು ಅಬೆ ಹೇಳಿದ್ದಾರೆ.