ಬರ್ಲಿನ್:ಮ್ಯೂನಿಚ್‌ನ ಜನನಿಬಿಡ ಪ್ರದೇಶದಲ್ಲಿನ ರೈಲು ಮಾರ್ಗದ ಪಕ್ಕದ ನಿರ್ಮಾಣ ಸ್ಥಳದಲ್ಲಿ ಎರಡನೇ ಮಹಾಯುದ್ಧದ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು ಸ್ಥಿತಿ ಗಂಭೀರವಾಗಿದೆ ಎಂದು ಜರ್ಮನ್ ಪೊಲೀಸರು ತಿಳಿಸಿದ್ದಾರೆ.
ಡೊನ್ನರ್ಸ್‌ಬರ್ಗರ್ ಬ್ರೂಕೆ ನಿಲ್ದಾಣದ ಬಳಿಯಿರುವ ಸೈಟ್ನಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಆ ಪ್ರದೇಶ ದಟ್ಟವಾದ ಹೊಗೆಯಿಂದ ಆವೃತಗೊಂಡಿದೆ. ಜರ್ಮನಿಯ ರಾಷ್ಟ್ರೀಯ ರೈಲ್ವೆಯಿಂದ ನಡೆಸಲ್ಪಡುವ ನಿರ್ಮಾಣ ಸ್ಥಳವು ಮ್ಯೂನಿಚ್‌ನ ಕೇಂದ್ರ ನಿಲ್ದಾಣದ ಸಮೀಪದಲ್ಲಿದೆ. ಘಟನೆ ಹಿನ್ನೆಲೆಯಲ್ಲಿ ಜರ್ಮನಿಗೆ ತೆರಳುವ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.