ಕರ್ನಾಟಕ

karnataka

By

Published : Aug 22, 2021, 8:43 PM IST

ETV Bharat / international

ಅಫ್ಘನ್​ ಬಿಕ್ಕಟ್ಟು : ನಾಳೆ ಜಿ-7 ರಾಷ್ಟ್ರಗಳ ತುರ್ತು ಸಭೆ ಕರೆದ ಜಾನ್ಸನ್​ ಬೋರಿಸ್

ಜಿ-7 ರಾಷ್ಟ್ರಗಳಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಅಮೆರಿಕ ಹಾಗೂ ಇಂಗ್ಲೆಂಡ್ ಇವೆ. ಈ ಬಾರಿ ಜಿ-7 ರಾಷ್ಟ್ರಗಳ ಅಧ್ಯಕ್ಷತೆಯನ್ನು ಇಂಗ್ಲೆಂಡ್ ವಹಿಸಿಕೊಂಡಿದೆ..

ಜಾನ್ಸನ್​ ಬೋರಿಸ್
ಜಾನ್ಸನ್​ ಬೋರಿಸ್

ಲಂಡನ್(ಇಂಗ್ಲೆಂಡ್):ಅಫ್ಘಾನಿಸ್ತಾನದ ಬಿಕ್ಕಟ್ಟು ಕುರಿತು ತುರ್ತು ಮಾತುಕತೆ ನಡೆಸುವ ಸಲುವಾಗಿ ಮಂಗಳವಾರ ಏಳು ರಾಷ್ಟ್ರಗಳ (ಜಿ7) ನಾಯಕರ ಸಭೆಯನ್ನು ಕರೆಯುವುದಾಗಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸದ್ಯದ ಪರಿಸ್ಥಿತಿಯಲ್ಲಿ ಅಫ್ಘನ್ನಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವುದನ್ನು ಖಚಿತ ಪಡಿಸಿಕೊಳ್ಳಲು, ಕಳೆದ 20 ವರ್ಷಗಳಿಂದ ಅಫ್ಘನ್ ಪ್ರಜೆಗಳು ಪಡೆದಿರುವ ಲಾಭವನ್ನು ಬೆಂಬಲಿಸುವುದು ಇಂದಿನ ಅತ್ಯಗತ್ಯ ಎಂದು ಹೇಳಿದ್ದಾರೆ.

ಜಿ-7 ರಾಷ್ಟ್ರಗಳಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಅಮೆರಿಕ ಹಾಗೂ ಇಂಗ್ಲೆಂಡ್ ಇವೆ. ಈ ಬಾರಿ ಜಿ-7 ರಾಷ್ಟ್ರಗಳ ಅಧ್ಯಕ್ಷತೆಯನ್ನು ಇಂಗ್ಲೆಂಡ್ ವಹಿಸಿಕೊಂಡಿದೆ.

ಇದನ್ನೂ ಓದಿ: ಅನಿವಾರ್ಯವಾದರೆ ತಾಲಿಬಾನಿಗಳೊಂದಿಗೆ ಕೆಲಸ ಮಾಡುತ್ತೇವೆ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ABOUT THE AUTHOR

...view details