ವುಹಾನ್:ಚೀನಾದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗುವ ಒಂದು ತಿಂಗಳು ಮೊದಲೇ ವುಹಾನ್ ಇನ್ಸ್ಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ಯ ಮೂವರು ಸಂಶೋಧಕರು ಕೋವಿಡ್ಗೆ ಚಿಕಿತ್ಸೆ ಕೋರಿದ್ದರು ಎಂದು ಅಮೆರಿದ ದಿ ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಈ ಮೂವರು ಸಂಶೋಧಕರಿಗೆ ಯಾವಾಗ ಅನಾರೋಗ್ಯ ಉಂಟಾಗಿತ್ತು, ಅವರು ಯಾವಾಗ ಚಿಕಿತ್ಸೆ ಕೋರಿದರು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ. ಈ ವರದಿಯೂ ಕೋವಿಡ್ ವೈರಸ್ ಡಬ್ಲ್ಯುಐವಿಯಿಂದಲೇ ಹರಡಿದೆಯೇ ಎಂಬ ಅನುಮಾನವನ್ನು ಹುಟ್ಟು ಹಾಕಿದೆ.