ದುಬೈ(ಯುಎಇ):ಭಾರತೀಯ ಚಿತ್ರರಂಗದ ಬಹುನೀರಿಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್-2 ರಲ್ಲಿ ನಟಿಸಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಂಜಯ್ ದತ್ ಅವರು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಪರ್ವೇಜ್ ಮುಷರಫ್ ಅವರನ್ನು ದುಬೈನಲ್ಲಿ ಭೇಟಿಯಾಗಿದ್ದಾರೆಂದು ಹೇಳಲಾಗುತ್ತಿರುವ ಈ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟು ಮಾಡುತ್ತಿದೆ.
ದತ್ ಸದ್ಯ ದುಬೈ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಮುಷರಫ್ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಪಾಕ್ನ ಅಧ್ಯಕ್ಷರಾಗಿದ್ದ ಮುಷರಫ್ ಅನೇಕ ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ 2016ರಲ್ಲಿ ಯುಎಇಗೆ ತೆರಳಿದ್ದ ಮುಷರಫ್, ತದನಂತರ ಪಾಕ್ಗೆ ಹಿಂದಿರುಗಿಲ್ಲ. 1999ರಲ್ಲಿ ಭಾರತ-ಪಾಕ್ ನಡುವಿನ ಯುದ್ಧದ ಸಂದರ್ಭದಲ್ಲಿ ಇವರು ಪಾಕ್ ಸೇನಾ ಮುಖ್ಯಸ್ಥರಾಗಿದ್ದರು.