ಕರ್ನಾಟಕ

karnataka

ಚೀನಾಕ್ಕೆ ಕೊರೊನಾ ತಂದಿದ್ದು ಅಮೆರಿಕ ಸೇನೆ ಹೇಳಿಕೆ... ಚೀನಾ ಅಧಿಕಾರಿಗೆ ಯುಎಸ್​​ನಿಂದ ಸಮನ್ಸ್​

ಮಹಾಮಾರಿ ಕೊರೊನಾಗೆ ಈಗಾಗಲೇ ಅನೇಕರು ಸಾವನ್ನಪ್ಪಿದ್ದು, ದಿನದಿಂದ ದಿನಕ್ಕೆ ವೈರಸ್​ ವಿಸ್ತಾರಗೊಳ್ಳುತ್ತಲೇ ಸಾಗಿದೆ. ಇದೇ ವಿಷಯಕ್ಕಾಗಿ ಇದೀಗ ಚೀನಾ-ಅಮೆರಿಕ ನಡುವೆ ವಾಕ್​ ಸಮರ ಶುರುವಾಗಿದೆ.

By

Published : Mar 14, 2020, 1:48 PM IST

Published : Mar 14, 2020, 1:48 PM IST

US summons Chinese ambassador
US summons Chinese ambassador

ವಾಷಿಂಗ್ಟನ್​:ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿ, ಈಗಾಗಲೇ ಸಾವಿರಾರು ಜನರ ಪ್ರಾಣ ಬಲಿ ಪಡೆದಿರುವ ಮಹಾಮಾರಿ ಕೊರೊನಾ ಮೊದಲು ಹುಟ್ಟಿಕೊಂಡಿದ್ದು, ಚೀನಾದಲ್ಲಿ ಎಂಬುದು ಎಲ್ಲರಿಗೂ ಗೊತ್ತಿದೆ. ಇದರ ಮಧ್ಯೆ ಚೀನಾಕ್ಕೆ ಕೊರೊನಾ ವೈರಸ್​​ ತಂದಿದ್ದು, ಅಮೆರಿಕ​ ಸೇನೆ ಎಂದು ಚೀನಾ ಅಧಿಕಾರಿ ಹೇಳಿಕೆ ನೀಡಿದ್ದು, ಇದೀಗ ಅವರಿಗೆ ಸಮನ್ಸ್​ ಜಾರಿಯಾಗಿದೆ.

ಯುನೈಟೆಡ್​​ ಸ್ಟೇಟ್ಸ್​​ ಇದೀಗ ಈ ರೀತಿಯ ವಿವಾದಿತ ಹೇಳಿಕೆ ನೀಡಿರುವ ಚೀನಾ ರಾಯಭಾರಿ ಅಧಿಕಾರಿಗೆ ಸಮನ್ಸ್​ ಜಾರಿ ಮಾಡಿದೆ. ಹೀಗಾಗಿ ಉಭಯ ದೇಶಗಳ ನಡುವಿನ ವಾಕ್ಸಮರ ಇದೀಗ ಮತ್ತಷ್ಟು ತಾರಕ್ಕೇರಿದೆ.

ಕಳೆದೆರಡು ದಿನಗಳ ಹಿಂದೆ ಚೀನಾದ ವಕ್ತಾರ ಝಹಾವೋ ಲಿಜಿಯಾನ್, ಅಮೆರಿಕ ಸೇನೆ ಬಹುಶಃ ಕೋವಿಡ್​-19 ವೈರಸ್​ ವುಹಾನ್​ಗೆ ತಂದಿರಬಹುದು ಎಂದು ಟ್ವೀಟ್​ ಮಾಡಿದ್ದರು. ಇದಕ್ಕೆ ಇದೀಗ ಪ್ರತಿರೋಧ ವ್ಯಕ್ತಪಡಿಸಿರುವ ಅಮೆರಿಕ ಸಮನ್ಸ್​ ಜಾರಿ ಮಾಡಿ ಉತ್ತರ ನೀಡುವಂತೆ ತಿಳಿಸಿದೆ.

ಚೀನಾದಲ್ಲಿ ಹುಟ್ಟಿಕೊಂಡಿರುವ ಮಹಾಮಾರಿ ಕೊರೊನಾ ಈಗಾಗಲೇ ಅನೇಕ ದೇಶಗಳಿಗೆ ಲಗ್ಗೆಯಿಟ್ಟಿದ್ದು, ಭಾರತದಲ್ಲೂ ಇಬ್ಬರ ಬಲಿ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚಿನ ರೀತಿಯಲ್ಲಿ ಇದು ಹರಡದಂತೆ ನಿಗಾ ವಹಿಸಲಾಗಿದೆ.

ABOUT THE AUTHOR

...view details