ಕರ್ನಾಟಕ

karnataka

ETV Bharat / international

3 ತಿಂಗಳೊಳಗೆ ಅಫ್ಘಾನ್​​ ರಾಜಧಾನಿಯೂ ತಾಲಿಬಾನ್​ ಹಿಡಿತಕ್ಕೆ: ವರದಿ

ಈಗಾಗಲೇ ಅಫ್ಘಾನಿಸ್ತಾನದ 8 ಪ್ರಾಂತೀಯ ರಾಜಧಾನಿಗಳಲ್ಲಿ ತನ್ನ ಹಿಡಿತ ಸಾಧಿಸಿರುವ ತಾಲಿಬಾನ್ ಸಂಘಟನೆ ಮುಂದಿನ 90 ದಿನಗಳ ಒಳಗೆ ರಾಜಧಾನಿ ಕಾಬೂಲ್ ಅನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಆತಂಕ ಎದುರಾಗಿದೆ.

By

Published : Aug 12, 2021, 2:05 PM IST

Taliban Could Take Afghan Capital In 90 Days
3 ತಿಂಗಳೊಳಗೆ ಅಫ್ಘನ್​ ರಾಜಧಾನಿಯೂ ತಾಲಿಬಾನ್​ ವಶಕ್ಕೆ

ವಾಷಿಂಗ್ಟನ್/ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರು ಮತ್ತು ಅಫ್ಘನ್​ ಪಡೆಗಳ ನಡುವಿನ ಯುದ್ಧ ತೀವ್ರವಾಗುತ್ತಿದ್ದು, 90 ದಿನಗಳ ಒಳಗೆ ರಾಜಧಾನಿ ಕಾಬೂಲ್ ಮೇಲೆ ತಾಲಿಬಾನ್​ ಸಂಘಟನೆ ತನ್ನ ಹಿಡಿತ ಸಾಧಿಸಬಹುದು ಎಂಬ ಸ್ಫೋಟಕ ಮಾಹಿತಿಯನ್ನು ಯುಎಸ್ ಗುಪ್ತಚರ ಸಂಸ್ಥೆ ಹೊರಹಾಕಿದೆ.

ಕೇವಲ ಒಂದು ವಾರದೊಳಗಾಗಿ ತಾಲಿಬಾನ್​ ಉಗ್ರರು ಕುಂದುಜ್ ಪ್ರಾಂತ್ಯ ಸೇರಿದಂತೆ 8 ಪ್ರಾಂತೀಯ ರಾಜಧಾನಿಗಳನ್ನು ತಮ್ಮ ವಶಕ್ಕೆ ಪಡೆದಿದ್ದು, ಇನ್ನೂ ಮೂರನ್ನು ವಶಪಡಿಸಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಅಮೆರಿಕ ಸೇನೆಯ ಕೊನೆಯ ತಂಡವೂ ಈ ತಿಂಗಳ ಕೊನೆಯಲ್ಲಿ ಜಾಗ ಖಾಲಿ ಮಾಡಲಿದ್ದು, ಬಳಿಕ ಅಫ್ಘಾನಿಸ್ತಾನದ ಮೂರನೇ ಎರಡರಷ್ಟು ಪ್ರದೇಶ ತಾಲಿಬಾನ್ ನಿಯಂತ್ರಣಕ್ಕೆ ಬರಲಿದೆ. ಹೀಗಾಗಿ ಇದೀಗ ಯುಎಸ್ ಸೈನ್ಯವನ್ನು ಹಿಂತೆಗೆದುಕೊಂಡು ಅಫ್ಘಾನಿಸ್ತಾನ ಸರ್ಕಾರವನ್ನು ಏಕಾಂಗಿಯಾಗಿ ಹೋರಾಡಲು ಬಿಟ್ಟ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರ ನಿರ್ಧಾರವನ್ನು ವ್ಯಾಪಕವಾಗಿ ಖಂಡಿಸಲಾಗುತ್ತಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತ ಕೊಟ್ಟಿದ್ದ Mi-35 ಹೆಲಿಕಾಪ್ಟರ್ ವಶಕ್ಕೆ ಪಡೆದ ತಾಲಿಬಾನ್‌ ಉಗ್ರರು

ಯುಎಸ್​- ತಾಲಿಬಾನ್​ ಒಪ್ಪಂದ

ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಯುಸ್ ಸೇನೆ ಕಾರ್ಯ ನಿರ್ವಹಿಸುತ್ತಿತ್ತು. ತಾಲಿಬಾನ್​ ಉಗ್ರರ ವಿರುದ್ಧ ಹೋರಾಡಿ ಅನೇಕ ನಾಗರಿಕರನ್ನು ರಕ್ಷಿಸಿತ್ತು. ಆದರೆ ಅಫ್ಘಾನಿಸ್ತಾನದಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಡೊನಾಲ್ಡ್​​ ಟ್ರಂಪ್​ ಯುಸ್​ ಅಧ್ಯಕ್ಷರಾಗಿದ್ದ ಅವಧಿಯಲ್ಲಿ (2020ರ ಫೆಬ್ರವರಿ) ಅಮೆರಿಕ ಮತ್ತು ತಾಲಿಬಾನ್​ ನಡುವೆ ಒಪ್ಪಂದವಾಗಿತ್ತು. ಒಪ್ಪಂದ ಪ್ರಕಾರ ಹಂತಹಂತವಾಗಿ ತನ್ನೆಲ್ಲಾ ಸೈನಿಕರನ್ನು ವಾಪಸು ಕರೆಯಿಸಿಕೊಳ್ಳುವುದಾಗಿ ಅಮೆರಿಕ ತಿಳಿಸಿತ್ತು. ಜೋ ಬೈಡನ್​ ಅವರು ಅಮೆರಿಕ​ ಅಧ್ಯಕ್ಷರಾದ ಮೇಲೆ 2021ರ ಆಗಸ್ಟ್​-ಸೆಪ್ಟೆಂಬರ್​ ವೇಳೆಗೆ ಎಲ್ಲಾ ಸೈನಿಕರನ್ನು ಕರೆಯಿಸಿಕೊಳ್ಳುವುದಾಗಿ ಹೇಳಿದ್ದರು.

ಅಫ್ಘಾನಿಸ್ತಾನದಿಂದ ಅಮೆರಿಕದ ಶೇ.90ರಷ್ಟು ಸೇನೆ ಹಿಂದೆ ಸರಿದ ಬಳಿಕ ದೇಶವು ಹಿಂಸಾಚಾರದ ಉಲ್ಬಣಕ್ಕೆ ಸಾಕ್ಷಿಯಾಗಿದೆ. ಅಫ್ಘಾನ್​ ನಾಗರಿಕರು ಮತ್ತು ಭದ್ರತಾ ಪಡೆಗಳ ವಿರುದ್ಧ ತಾಲಿಬಾನ್​ ಉಗ್ರರು ತಮ್ಮ ಅತಿಕ್ರಮಣವನ್ನು ತೀವ್ರಗೊಳಿಸಿದ್ದಾರೆ. 2021ರ ಮೊದಲಾರ್ಧದಲ್ಲೇ ಉಗ್ರರ ದಾಳಿಗೆ 1,659ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 3,254 ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸಾವಿರಾರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ABOUT THE AUTHOR

...view details