ಕರ್ನಾಟಕ

karnataka

ETV Bharat / international

ಮತ್ತೆ ಆರಿಸಿ ಬಂದ ತೈವಾನ್​​ ನ ಆಡಳಿತ ಪಕ್ಷ... ಚೀನಾಕ್ಕೆ ಮತ್ತೆ ಎಚ್ಚರಿಕೆ ಗಂಟೆ!?

ಸದಾ ಚೀನಾದ ವಿರುದ್ಧ ನಿಲುವುಗಳನ್ನು ಹೊಂದಿರುವ ಮತ್ತು ತೈವಾನ್​ ಸ್ವತಂತ್ರ ರಾಷ್ಟ್ರದ ಕನಸು ಹೊತ್ತಿರುವ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್​ ಪಕ್ದ ಅಭ್ಯರ್ಥಿ ತ್ಸೈ ಇಂಗ್-ವೆನ್, ಶನಿವಾರ ನಡೆದ ಚುನಾವಣೆಯಲ್ಲಿ ಎರಡನೇ ಬಾರಿಗೆ ವಿಜಯದ ಪತಾಕೆ ಹಾರಿಸಿದ್ದಾರೆ.

By

Published : Jan 13, 2020, 8:34 AM IST

Taiwan's leader re-elected
ಭರ್ಜರಿ ಗೆಲುವಿನೊಂದಿಗೆ ಪುನರಾಯ್ಕೆಗೊಂಡ ತ್ಸೈ ಇಂಗ್-ವೆನ್​

ತೈಪೆ(ತೈವಾನ್​):ಸದಾ ಚೀನಾದ ವಿರುದ್ಧ ನಿಲುವುಗಳನ್ನು ಹೊಂದಿರುವ ಮತ್ತು ತೈವಾನ್​ ಸ್ವತಂತ್ರ ರಾಷ್ಟ್ರದ ಕನಸು ಹೊತ್ತಿರುವ ತ್ಸೈ ಇಂಗ್-ವೆನ್, ಶನಿವಾರ ನಡೆದ ಚುನಾವಣೆಯಲ್ಲಿ ಎರಡನೇ ಬಾರಿಗೆ ವಿಜಯದ ಪತಾಕೆ ಹಾರಿಸಿದೆ.

ಭರ್ಜರಿ ಗೆಲುವಿನೊಂದಿಗೆ ಪುನರಾಯ್ಕೆಗೊಂಡ ತ್ಸೈ ಇಂಗ್-ವೆನ್​

ಎಣಿಕೆಯಾದ ಶೇ 99.75 ಮತಗಳಲ್ಲಿ ಅಧ್ಯಕ್ಷೆ ತ್ಸೈ 57.2 ಶೇ ಮತಗಳನ್ನು ಪಡೆದಿದ್ದರೆ, ಪ್ರತಿಸ್ಪರ್ಧಿ ಹಾಗೂ ನ್ಯಾಷನಲಿಸ್ಟ್ ಪಕ್ಷದ ಅಭ್ಯರ್ಥಿ ಹಾನ್ ಕುವೋ-ಯು 38.6 ಶೇ ಮತಗಳನ್ನು ಪಡೆದಿದ್ದಾರೆ. ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಚೀನಾದ ವಿರುದ್ಧ ವಾಗ್ದಾಳಿ ನಡೆಸಿದ ತ್ಸೈ ಇಂಗ್-ವೆನ್, ಚೀನಾ ತೈವಾನ್​ನನ್ನು ದಂಗೆಕೋರರ ಪ್ರಾಂತ್ಯವೆಂದು ಪರಿಗಣಿಸಬಾರದು. ಸ್ವಯಂ ಆಡಳಿತ ಹೊಂದಿರುವ ದ್ವೀಪ ರಾಷ್ಟ್ರದ ವಿರುದ್ಧ ಬೆದರಿಕೆ ಒಡ್ಡುವ ಪ್ರಯತ್ನಗಳನ್ನು ನಿಲ್ಲಿಸಬೇಕು ಎಂದಿದ್ದಾರೆ.

ಇವತ್ತು ನಾನು ಮತ್ತೊಮ್ಮೆ ನೆನಪಿಸುತ್ತಿದ್ದೇನೆ, ಬೀಜಿಂಗ್​ ಆಡಳಿತಕ್ಕೆ ಶಾಂತಿ, ಪ್ರಜಾಪ್ರಭುತ್ವ ಮೂಲ ಅಂಶವಾಗಿರಬೇಕು. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರ ಬೆದರಿಕೆ ಒಡ್ಡುವುದನ್ನು ಸಹಿಸಿಕೊಳ್ಳುವುದಿಲ್ಲ. ಇದು ಬೀಜಿಂಗ್​ ಆಡಳಿತಕ್ಕೆ ಗೊತ್ತಿದೆ ಎಂದು ತಿಳಿದಿದ್ದೇನೆ ಎಂದಿದ್ದಾರೆ.

1949ರಲ್ಲಿ ನಡೆದ ನಾಗರಿಕ ಯುದ್ದದಲ್ಲಿ ಚೀನಾದಿಂದ ಬೇರ್ಪಟ್ಟು ತನ್ನ ಸ್ವಂತ ಬಲದಿಂದ ಅಭಿವೃದ್ದಿ ಹೊಂದಿದ ಒಂದು ದ್ವೀಪ ರಾಷ್ಟ್ರವಾಗಿ ತೈವಾನ್ ನೆಲೆ ನಿಂತಿದೆ. ಆದರೆ ಬೀಜಿಂಗ್( ಚೀನಾದ ಆಡಳಿತ) ತೈವಾನ್​ ಮೇಲೆ ಈಗಲೂ ಸಾರ್ವಭೌಮತ್ವವನ್ನು ಸ್ಥಾಪಿಸಿ ಅಲ್ಲಿನ 23 ಮಿಲಿಯನ್ ಜನರಿಗೆ ಬೆದರಿಕೆ ಒಡ್ಡುವಂತ ಕೆಲಸಗಳನ್ನು ಮಾಡುತ್ತಿದೆ.

ಪ್ರಸ್ತುತ ಎರಡನೇ ಬಾರಿಗೆ ತೈವಾನ್ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ತ್ಸೈ ಇಂಗ್-ವೆನ್, ತನ್ನ ಮೊದಲ ಅವಧಿಯಲ್ಲಿ ತೈವಾನ್​ನ್ನು ಚೀನಾದ ಕಪಿಮುಷ್ಠಿಯಿಂದ ಬಿಡಿಸಲು ಶತ ಪ್ರಯತ್ನ ನಡೆಸಿದ್ದರು. ಈ ವೇಳೆ ಚೀನಾ ಮತ್ತು ತೈವಾನ್ ನಡುವೆ ಹಲವು ಬಾರಿ ಸಂಘರ್ಷಗಳು ನಡೆದಿದ್ದವು. ಸದ್ಯ ತ್ಸೈ ಇಂಗ್-ವೆನ್ ಎರಡನೇ ಬಾರಿಗೆ ತೈವಾನ್ ಆಡಳಿತ ಚುಕ್ಕಾಣಿ ಹಿಡಿಯಲು ಅಣಿಯಾಗಿದ್ದು, ಇದರಿಂದ ಚೀನಾ-ತೈವಾನ್ ನಡುವಿನ ಸಂಘರ್ಷ ಇನ್ನೂ ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ತೈವಾನ್ ಜನರು ಇಲ್ಲಿನ ಪ್ರಜಾಪ್ರಭುತ್ವ ಮತ್ತು ಜೀವನ ಶೈಲಿಯನ್ನು ರಕ್ಷಿಸಲು ಬದ್ದರಾಗಿದ್ದಾರೆ ಎಂಬುವುದು ಚುನಾವಣಾ ಫಲಿತಾಂಶದಿಂದ ತಿಳಿಯುತ್ತದ ಎಂದು ತ್ಸೈ ಪ್ರತಿಕ್ರಿಯಿಸಿದ್ದಾರೆ.

ಇನ್ನು ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ರಾಜಧಾನಿ ತೈಪೆಯಲ್ಲಿರುವ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್​ ಪಕ್ಷದ ಕಚೇರಿಯಲ್ಲಿ ತ್ಸೈ ಅಭಿಮಾನಿಗಳಿಂದ ಹರ್ಷೋದ್ಗಾರ ಮೊಳಗಿತ್ತು. ಗೆಲುವಿನ ನಗೆ ಬೀರಿದ ತ್ಸೈಯನ್ನು ಕಾರ್ಯಕರ್ತರು ಅಭಿನಂದಿಸಿದರು. ಇನ್ನು ಪರಾಜಿತ ಅಭ್ಯರ್ಥಿ ಹಾನ್ ಕುವೋ-ಯು ಮೇಯರ್​ ಆಗಿರುವ ಕಾವೋಸಿಯುಂಗ್‌ ನಗರದಲ್ಲಿ ಪರಿಸ್ಥಿತಿ ಕೊಂಚ ಭಿನ್ನವಾಗಿತ್ತು, ಹಾನ್​ ಅಭಿಮಾನಿಗಳು ನಿರಾಶ ಭಾವದಿಂದ ಇದ್ದರು, ಮತ್ತು ಇನ್ನೂ ಕೆಲವು ಅಭಿಮಾನಿಗಳು ಹಾನ್ ಸೋಲಿಗೆ ಕಣ್ಣೀರು ಸುರಿಸಿದರು. ದಕ್ಷಿಣ ಬಂದರು ನಗರಿ ಕಾವೋಸಿಯುಂಗ್​ನಲ್ಲಿ ಮಾತನಾಡಿದ ಪರಾಜಿತ ಅಭ್ಯರ್ಥಿ ಹಾನ್ ಕುವೋ-ಯು, ಜಯಗಳಿಸಿದ ತ್ಸೈ ಇಂಗ್-ವೆನ್ ಅವರನ್ನು ಅಭಿನಂದಿಸಿದರು ಮತ್ತು ಕಾವೋಸಿಯುಂಗ್‌ ಮೇಯರ್ ಆಗಿ ಮುಂದುವರೆಯುದಾಗಿ ತಿಳಿಸಿದರು.

ಚೀನಾದ ಸಾರ್ವಭೌಮತ್ವದಿಂದ ಹೊರ ಬರಲು ಪ್ರಯತ್ನಿಸಿ ತಿಂಗಳುಗಳ ಕಾಲ ಸರ್ಕಾರ ವಿರೋಧಿ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಹಾಂಕ್​ ಕಾಂಗ್​ ನಗರದ ಹಲವಾರು ಜನರಿಗೆ ದ್ವೀಪ ರಾಷ್ಟ್ರ ತೈವಾನ್ ನೆಲಯಾಗಿದೆ. ಹಾಂಕ್​ ಕಾಂಗ್​ ಮತ್ತು ತೈವಾನ್ ಎರಡೂ ಪ್ರದೇಶಗಳು ಚೀನಾದ ಕಪಿಮುಷ್ಠಿಯಿಂದ ಹೊರ ಬರಲು ಪ್ರಯತ್ನಿಸುತ್ತಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ಆಡಳಿತಕ್ಕೆ ಸಂಬಂಧಪಟ್ಟ ಗೊಂದಲಗಳ ಬಗ್ಗೆ ಚೀನಾದೊಂದಿಗೆ ತೈವಾನ್ ಮುಕ್ತ ಮಾತುಕತೆಗೆ ಮುಂದಾಗಬೇಕು ಎಂದು ನ್ಯಾಷನಲಿಸ್ಟ್​ ಪಕ್ಷದ ನಾಯಕ ಮತ್ತು ಪರಾಜಿತ ಅಭ್ಯರ್ಥಿ ಹಾನ್ ಈ ಮೊದಲು ಹೇಳಿದ್ದರು. ಇದಕ್ಕೆ ಕಟುವಾಗಿ ಪ್ರತಿಕ್ರಯಿಸಿದ್ದ ತ್ಸೈ ಇಂಗ್-ವೆನ್ ಹಾಗೂ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್​ ಪಕ್ಷ, ತೈವಾನ್ ಯಾವತ್ತೂ ಒಂದು ರಾಷ್ಟ್ರ ಎರಡು ಸರ್ಕಾರ ಮತ್ತು ವಸಾಹತು ಶಾಹಿಯನ್ನು ಒಪ್ಪುದಿಲ್ಲ ಎಂದಿದ್ದರು.


ABOUT THE AUTHOR

...view details