ಕರ್ನಾಟಕ

karnataka

ETV Bharat / international

ಪರಿಹಾರ ನೀಡದೆ ಏರ್ಪೋರ್ಟ್​ ವಿಸ್ತರಣೆಗೆ ಭೂಮಿ ಸ್ವಾಧೀನ: ತೀವ್ರಗೊಂಡ ಪ್ರತಿಭಟನೆ - ಸ್ಕಾರ್ಡು ವಿಮಾನ ನಿಲ್ದಾಣ

ಸ್ಕಾರ್ಡು ವಿಮಾನ ನಿಲ್ದಾಣವನ್ನು ವಿಸ್ತರಿಸಲು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕಾಗಿ ಪಾಕಿಸ್ತಾನ ವಾಯುಪಡೆಯ ವಿರುದ್ಧ ಗಿಲ್ಗಿಟ್​​ ಬಾಲ್ಟಿಸ್ತಾನದ ಜನತೆ ಸಿಡಿದೆದ್ದಿದ್ದಾರೆ. ಸ್ವಾಧೀನಪಡಿಸಿಕೊಂಡಿರುವ ಖಾಲಿ ಭೂಮಿಯನ್ನು ಸರ್ಕಾರಿ ಜಮೀನು ಎಂದು ಪಿಎಎಫ್ ಘೋಷಿಸಿದ್ದು, ಇದಕ್ಕಾಗಿ ಯಾವುದೇ ಪರಿಹಾರ ನಿಗದಿಪಡಿಸಿಲ್ಲ..

Protest erupts in Gilgit Baltistan
Protest erupts in Gilgit Baltistan

By

Published : Jun 21, 2021, 11:01 PM IST

ಸ್ಕಾರ್ಡು(ಗಿಲ್ಗಿಟ್-ಬಾಲ್ಟಿಸ್ತಾನ್): ಪರಿಹಾರ ನೀಡದೆ ಸ್ಕಾರ್ಡು ವಿಮಾನ ನಿಲ್ದಾಣವನ್ನು ವಿಸ್ತರಿಸಲು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕಾಗಿ ಪಾಕಿಸ್ತಾನ ವಾಯುಪಡೆಯ ವಿರುದ್ಧ ಗಿಲ್ಗಿಟ್​​ ಬಾಲ್ಟಿಸ್ತಾನದ ಜನತೆ ಸಿಡಿದೆದ್ದಿದ್ದಾರೆ. ಸ್ವಾಧೀನಪಡಿಸಿಕೊಂಡಿರುವ ಖಾಲಿ ಭೂಮಿಯನ್ನು ಸರ್ಕಾರಿ ಜಮೀನು ಎಂದು ಪಿಎಎಫ್ ಘೋಷಿಸಿದ್ದು, ಇದಕ್ಕಾಗಿ ಯಾವುದೇ ಪರಿಹಾರ ನಿಗದಿಪಡಿಸಿಲ್ಲ. ಆದರೆ, ಪ್ರತಿಭಟನಾಕಾರರು ಪಾಕಿಸ್ತಾನಕ್ಕೆ ಕಾಲುವೆಯೊಂದಕ್ಕೆ 2.5 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಈ ಮಧ್ಯೆ ಯುನೈಟೆಡ್ ಕಾಶ್ಮೀರ ಪೀಪಲ್ಸ್ ನ್ಯಾಷನಲ್ ಪಾರ್ಟಿ (ಯುಕೆಪಿಎನ್​ಪಿ) ಪಾಕಿಸ್ತಾನ, ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಜಿನೀವಾದಲ್ಲಿ ಯುಎನ್ ಮಾನವ ಹಕ್ಕುಗಳ ಮಂಡಳಿಯ 47 ನೇ ಅಧಿವೇಶನ ನಡೆಯುತ್ತಿದ್ದು, ಯುಎನ್ ಮಾನವ ಹಕ್ಕುಗಳ ಉನ್ನತ ಆಯುಕ್ತರ ಕಚೇರಿಗೆ (ಒಎಚ್‌ಸಿಎಚ್ಆರ್) ಪತ್ರ ಬರದಿದೆ. ಆಜಾದ್ ಕಾಶ್ಮೀರ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ಎಂದು ಕರೆಯಲ್ಪಡುವ ಸ್ಥಳೀಯ ಜನಸಂಖ್ಯೆಯು ಯಾವುದೇ ಮೂಲಭೂತ ರಾಜಕೀಯ ಹಕ್ಕುಗಳನ್ನು ಅನುಭವಿಸುವುದಿಲ್ಲ. ಮಾನವ ಹಕ್ಕುಗಳ ಪರಿಶೀಲನೆಯಂತೆ, ಸರ್ಕಾರವು ಜನರ ಪ್ರಜಾಪ್ರಭುತ್ವ ಸ್ವಾತಂತ್ರ್ಯಗಳನ್ನು ನಿಯಂತ್ರಿಸುತ್ತಿದೆ. ಅಲ್ಲದೆ ಚಿತ್ರಹಿಂಸೆ ನೀಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸರ್ಕಾರ ನಿಯಂತ್ರಣ ಸಾಧಿಸುತ್ತಿದೆ. ಅಧಿಕಾರಶಾಹಿ ನಿರ್ಬಂಧಗಳು ಮತ್ತು ದಬ್ಬಾಳಿಕೆಯ ಮೂಲಕ ಭೂಪ್ರದೇಶದಲ್ಲಿ ಸ್ವತಂತ್ರ ಮಾಧ್ಯಮಗಳ ರಚನೆಯನ್ನು ಪಾಕಿಸ್ತಾನ ತಡೆದಿದೆ. ಪಾಕಿಸ್ತಾನ ಸರ್ಕಾರದೊಂದಿಗೆ ಒಡನಾಟ ಚೆನ್ನಾಗಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳಲು ಬಯಸುವ ಯಾರಾದರೂ ಪಾಕಿಸ್ತಾನಕ್ಕೆ ನಿಷ್ಠೆಯ ಪ್ರತಿಜ್ಞೆಗೆ ಸಹಿ ಹಾಕಬೇಕಾಗುತ್ತದೆ, ಆದರೆ ಸ್ವತಂತ್ರ ಕಾಶ್ಮೀರಕ್ಕಾಗಿ ಸಾರ್ವಜನಿಕವಾಗಿ ಬೆಂಬಲಿಸುವ ಅಥವಾ ಶಾಂತಿಯುತವಾಗಿ ಕೆಲಸ ಮಾಡುವ ಯಾರಾದರೂ ಅಲ್ಲಿ ಕಿರುಕುಳವನ್ನು ಅನುಭವಿಸಬೇಕಾಗುತ್ತದೆ.

ಆಜಾದ್ ಕಾಶ್ಮೀರ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ರಾಷ್ಟ್ರೀಯತಾವಾದಿಗಳ ನಾಯಕರು ಮತ್ತು ರಾಜಕೀಯ ಕಾರ್ಯಕರ್ತರು ಮತ್ತು ಮಾನವ ಹಕ್ಕುಗಳ ರಕ್ಷಕರು ದೇಶದ್ರೋಹ ಆರೋಪ ಎದುರಿಸುತ್ತಿದ್ದಾರೆ ಎಂದೂ ಪತ್ರದಲ್ಲಿ ಬರೆಯಲಾಗಿದೆ.

ABOUT THE AUTHOR

...view details