ಕರ್ನಾಟಕ

karnataka

ETV Bharat / international

ಪಾಕ್‌ನಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ಕಾರಣ ಪೈಲಟ್‌ಗಳ 'ಕೊರೊನಾ ಚರ್ಚೆ'!

ಪಾಕಿಸ್ತಾನದ ವಿಮಾನವೊಂದು ಅಪಘಾತವಾಗಿ 97 ಜನರು ಸಾವನ್ನಪ್ಪಿರುವ ದುರಂತಕ್ಕೆ ಸಂಬಂಧಿಸಿದಂತೆ ಪಾಕ್ ಸಂಸತ್ತಿನಲ್ಲಿ ವಿಮಾನಯಾನ ಖಾತೆ ಸಚಿವ ಮಾಹಿತಿ ನೀಡಿದರು. ಈ ವೇಳೆ ಅವಘಡಕ್ಕೆ ಪೈಲಟ್​ಗಳು ಮಾಡಿರುವ ಘೋರ ಎಡವಟ್ಟು ಕಾರಣ ಎಂಬ ಆಘಾತಕಾರಿ ಮಾಹಿತಿ ಬಿಚ್ಚಿಟ್ಟರು.

By

Published : Jun 24, 2020, 4:49 PM IST

Karachi plane crash
Karachi plane crash

ಇಸ್ಲಾಮಾಬಾದ್​:ಕಳೆದ ತಿಂಗಳು ಪಾಕಿಸ್ತಾನದ ಕರಾಚಿ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಒಟ್ಟು 97 ಜನರು ಸಾವನ್ನಪ್ಪಿದ್ದರು. ಇದಕ್ಕೆ ಕಾರಣವಾಗಿದ್ದು ಪೈಲಟ್​ಗಳು ಮಾಡಿರುವ ಘೋರ ತಪ್ಪು ಎಂಬುದು ಇದೀಗ ಸಾಬೀತಾಗಿದೆ.

ಪಾಕಿಸ್ತಾನದ ಅಂತಾರಾಷ್ಟ್ರೀಯ ಏರ್​​​​ಲೈನ್ಸ್​ಗೆ ಸೇರಿದ ವಿಮಾನ ಜಿನ್ನಾ ವಿಮಾನ ನಿಲ್ದಾಣದಲ್ಲಿ ಲ್ಯಾಡಿಂಗ್​​ ಆಗ್ತಿದ್ದ ವೇಳೆ ವಸತಿ ಸಮುಚ್ಚಯದ ಮೇಲೆ ಅಪ್ಪಳಿಸಿತ್ತು. ಪರಿಣಾಮ, ಅದರಲ್ಲಿದ್ದ 107 ಜನರ ಪೈಕಿ 97 ಜನರು ಸಾವನ್ನಪ್ಪಿದ್ದರು. ತಾಂತ್ರಿಕ ವೈಫಲ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಆ ಸಂದರ್ಭದಲ್ಲಿ ಹೇಳಲಾಗಿತ್ತು. ಆದ್ರೆ ಅಸಲಿ ವಿಚಾರ ಈಗ ಬಹಿರಂಗವಾಗಿದೆ.

ಈ ದುರಂತಕ್ಕೆ ಸಂಬಂಧಿಸಿದಂತೆ ಪಾಕ್​ ವಿಮಾನಯಾನ ಸಚಿವ ಪಾಕ್‌ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಪೈಲಟ್​ಗಳು ಕೋವಿಡ್​ ಬಗ್ಗೆ ಚರ್ಚೆ ನಡೆಸುತ್ತಿದ್ದ ಕಾರಣ ಸರಿಯಾಗಿ ವಿಮಾನ ಲ್ಯಾಡಿಂಗ್​ ಮಾಡಿಲ್ಲ. ಏರ್‌ ಟ್ರಾಫಿಕ್ ಕಂಟ್ರೋಲ್​ ರೂಂ ನೀಡುತ್ತಿದ್ದ ಸಲಹೆಯನ್ನು ಅವರು ಸರಿಯಾಗಿ ಪಾಲನೆ ಮಾಡದೇ ಈ ಅವಘಡಕ್ಕೆ ಕಾರಣವಾಗಿದ್ದಾರೆ ಎಂದು ಸಚಿವ ಗುಲಾಂ ಸರ್ವಾರ್​ ತಿಳಿಸಿದ್ದಾರೆ.

ಈ ಹಿಂದೆ ವಿಮಾನವನ್ನು ರನ್‌ವೇಯಲ್ಲಿ ಇಳಿಸುವ ವೇಳೆ ಎರಡೂ ಇಂಜಿಲ್​ ವೈಫಲ್ಯವಾದ​ ಕಾರಣ ಪತನಗೊಂಡಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ 'ಮಾನವ ನಿರ್ಮಿತ' ತೊಂದರೆಯಿಂದ 97 ಜನರು ಸಾವನ್ನಪ್ಪಿರುವುದು ಗೊತ್ತಾಗಿದೆ.

ABOUT THE AUTHOR

...view details