ಗಿಲ್ಗಿಟ್-ಬಾಲ್ಟಿಸ್ತಾನ್:ಗಿಲ್ಗಿಟ್ ಬಾಲ್ಟಿಸ್ತಾನದ ರಾಜಕೀಯ ಕಾರ್ಯಕರ್ತ ಬಾಬಾ ಜಾನ್ ಅವರನ್ನು ಸುಮಾರು ಒಂದು ದಶಕಗಳ ಕಾಲದ ಕಾನೂನುಬಾಹಿರ ಜೈಲು ಶಿಕ್ಷೆಯ ನಂತರ ಶುಕ್ರವಾರದಂದು ಪಾಕ್ ಬಿಡುಗಡೆ ಮಾಡಿದೆ.
ಬಾಲ್ಟಿಸ್ತಾನ್ದಲ್ಲಿನ ಹೋರಾಟಕ್ಕೆ ಇಮ್ರಾನ್ ಖಾನ್ ಸರ್ಕಾರವು ಪಾಕಿಸ್ತಾನ ಜನರ ಮುಂದೆ ಶರಣಾಗಬೇಕಾಯಿತು. ರಾಜಕೀಯ ಕಾರ್ಯಕರ್ತರನ್ನು ಕಾನೂನುಬಾಹಿರವಾಗಿ ಬಂಧಿಸಿದ್ದರಿಂದ ರೊಚ್ಚಿಗೆದ್ದ ಗಿಲ್ಗಿಟ್- ಬಾಲ್ಟಿಸ್ಥಾನ ಜನ ಭಾರಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಜನರ ಹೋರಾಟದ ಮುಂದೆ ಶರಣಾಗಿದೆ.
ಹಂಜಾದ ನಾಸಿರಾಬಾದ್ ಕಣಿವೆಯಲ್ಲಿರುವ ಅಮೃತಶಿಲೆಯ ಗಣಿಗಳನ್ನು ಚೀನಾದ ಕಂಪನಿಗಳಿಗೆ ಅಕ್ರಮವಾಗಿ ಹಂಚಿಕೆ ಮಾಡಿದ ಸಲುವಾಗಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದ್ರೆ, ವಿಶ್ವಸಂಸ್ಥೆ ಮತ್ತು ಜಾಗತಿಕ ವೇದಿಕೆಗಳ ಒತ್ತಡದಿಂದ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಗಿದೆ.
ಗಿಲ್ಗಿಟ್ ಬಾಲ್ಟಿಸ್ತಾನದ ರಾಜಕೀಯ ಖೈದಿ ಬಾಬಾ ಜಾನ್ ಅವರನ್ನು ಬಿಡುಗಡೆ ಮಾಡಲು ಪಾಕಿಸ್ತಾನವನ್ನು ಒತ್ತಾಯಿಸಲಾಗಿತ್ತು. ಅಕ್ಟೋಬರ್ನಲ್ಲಿ ಪ್ರತಿಭಟನಾಕಾರರು ತೀವ್ರತರವಾದ ಕಾನೂನನ್ನು ಪ್ರಶ್ನಿಸಿದ್ದರಿಂದ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಆ ಸಂದರ್ಭ ಈ ಪ್ರದೇಶವು ಪಾಕಿಸ್ತಾನದ ಭಾಗವಲ್ಲ ಮತ್ತು ಪಾಕಿಸ್ತಾನದ ಕಾನೂನುಗಳನ್ನು ಇಲ್ಲಿ ಅನ್ವಯಿಸಬೇಡಿ ಎಂದು ಒತ್ತಾಯ ಕೇಳಿಬಂದಿತ್ತು. ಹಾಗಾಗಿ ಸದ್ಯ ಬಾಬಾ ಜಾನ್ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಪ್ರಮುಖ ಸ್ಥಳೀಯ ಕಾರ್ಯಕರ್ತ, ನಾಯಕ ಬಾಬಾ ಜಾನ್ ಅವರು 90 ವರ್ಷಗಳ ಶಿಕ್ಷೆಗೆ ಒಳಗಾಗಿದ್ದರು. ಆದ್ರೆ ಸದ್ಯ ಹಲವು ಒತ್ತಡಗಳ ಮೇರೆಗೆ ಅವರನ್ನು ಬಿಡುಗಡೆಗೊಳಿಸಲಾಗಿದೆ.