ಕರ್ನಾಟಕ

karnataka

ETV Bharat / international

ಅಮೆರಿಕ-ಇರಾನ್ ಸಂಘರ್ಷದಲ್ಲಿ ನಾವು ಭಾಗಿಯಾಗುದಿಲ್ಲ: ಇಮ್ರಾನ್ ಖಾನ್ ಸ್ಪಷ್ಟನೆ

ಮಧ್ಯ ಪ್ರಾಚ್ಯದ ಪ್ರಸ್ತುತ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪಾಕ್​ ಪ್ರಧಾನಿ ಇಮ್ರಾನ್​​ ಖಾನ್​, ಪರಿಸ್ಥಿತಿ ಕೈ ಮೀರುತ್ತಿರುವುದನ್ನು ತಪ್ಪಿಸಲು ಎರಡೂ ಕಡೆಯವರೂ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

By

Published : Jan 9, 2020, 10:13 AM IST

Pakistan PM Imran Khan
ಇಮ್ರಾನ್ ಖಾನ್ ಸ್ಪಷ್ಟನೆ

ಇಸ್ಲಾಮಾಬಾದ್ : ಅಮೆರಿಕ ಮತ್ತು ಇರಾನ್​ ನಡುವೆ ನಡೆಯುತ್ತಿರುವ ​ಸಂಘರ್ಷದಲ್ಲಿ ಯಾವುದೇ ಕಾರಣಕ್ಕೂ ನಾವು ಭಾಗಿಯಾಗುವುದಿಲ್ಲ ಎಂದು ಪಾಕಿಸ್ತಾನ ಅಧ್ಯಕ್ಷ ಇಮ್ರಾನ್​ ಖಾನ್ ಸ್ಪಷ್ಟಪಡಿಸಿದ್ದಾರೆ.

ಪೆಂಟಗಾನ್​ ಅದೇಶದ ಮೇರೆಗೆ ಬಾಗ್ದಾದ್​ ಏರ್​ಪೋರ್ಟ್​ ಮೇಲೆ ವಾಯು ದಾಳಿ ಮಾಡಿ ಟೆಹರಾನ್​​ ಪ್ರಮುಖ ಕಮಾಂಡರ್​ ಸೊಲೈಮಾನ್​​ ಹತ್ಯೆಯ ನಂತರ ಇದು ಹೆಚ್ಚಾಗಿದೆ ಎಂದಿದ್ದಾರೆ.

ಮಧ್ಯ ಪ್ರಾಚ್ಯದ ಪ್ರಸ್ತುತ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಖಾನ್​, ಪರಿಸ್ಥಿತಿ ಕೈ ಮೀರುತ್ತಿರುವುದನ್ನು ತಪ್ಪಿಸಲು ಎರಡೂ ಕಡೆಯವರೂ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಇದಕ್ಕೂ ಮೊದಲು ರಿಜಿಯೋದಲ್ಲಿ ಒಮಾನ್​ ಧಾರ್ಮಿಕ ವ್ಯವಹಾರಗಳ ಸಚಿವ ಅಬ್ದುಲ್ಲಾ ಬಿನ್ ಮುಹಮ್ಮದ್​ ಬಿನ್ ಅಬ್ದುಲ್ಲಾ ಅಲ್​-ಸಲ್ಮಿ ಜೊತೆ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಇಮ್ರಾನ್ ಖಾನ್ ಸಮಾಲೋಚನೆ ನಡೆಸಿದ್ದಾರೆ.

ಈ ಹಿಂದೆ ಪಾಕಿಸ್ತಾನ ಪ್ರಾದೇಶಿಕ ಸಂಘರ್ಷಗಳಿಂದ ಸಾಕಷ್ಟು ತೊಂದರೆ ಅನುಭವಿಸಿದೆ. ಆದ್ದರಿಂದ ನಾವು ಯಾವುದೇ ಸಂಘರ್ಷದಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸಲಹೆ ಪಡೆಯಲು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ , ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರನ್ನು ಸಂಪರ್ಕಿಸಿದ ಕೆಲವೇ ಗಂಟೆಗಳ ನಂತರ ಈ ಹೇಳಿಕೆ ಹೊರ ಬಂದಿದೆ.

ಇನ್ನು ಪಾಕಿಸ್ತಾನ ಸೇನಾ ಮುಖ್ಯಸ್ಥರ ಜೊತೆಗಿನ ಚರ್ಚೆ ಬಳಿಕ ಟ್ವೀಟ್​ ಮಾಡಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, "ನಮ್ಮ ಪಾಲುದಾರರು ಮತ್ತು ಮಿತ್ರರೊಂದಿಗೆ ಮಾತನಾಡುವುದನ್ನು ನಾನು ಯಾವಾಗಲೂ ಪ್ರಶಂಸಿಸುತ್ತೇನೆ" ಇದು ಸೇನಾ ಮುಖ್ಯಸ್ಥ ಮತ್ತು ಅಮೆರಿಕದ ಉನ್ನತ ಅಧಿಕಾರಿಗಳ ನಡುವಿನ ಮೊದಲ ಸಂವಹನವಲ್ಲ ಎಂದಿದ್ದಾರೆ.

ಇನ್ನು ಸೊಲೈಮಾನಿ ಹತ್ಯೆಯ ನಂತರ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಜನರಲ್ ಬಜ್ವಾ ಅವರೊಂದಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details