ಕರ್ನಾಟಕ

karnataka

ಭಾರತದ ಬಳಿಕ ಭೂತಾನ್ ಜೊತೆ ಗಡಿ ಕ್ಯಾತೆ ತೆಗೆದ ಚೀನಾ!

ಜಿಇಎಫ್ ಕೌನ್ಸಿಲ್ ಸದಸ್ಯರಲ್ಲಿ ಹೆಚ್ಚಿನವರು ಭೂತಾನ್ ದೃಷ್ಟಿಕೋನ ಬೆಂಬಲಿಸಿ, ಚೀನಾದ ಕೌನ್ಸಿಲ್ ಸದಸ್ಯರ ಆಕ್ಷೇಪಣೆ ಹೊರತಾಗಿಯೂ ಯೋಜನೆ ಅಂಗೀಕರಿಸಲಾಯಿತು. ಭೂತಾನ್ ಸರ್ಕಾರವು ಜಿಇಎಫ್ ಕೌನ್ಸಿಲ್​ಗೆ ಪತ್ರ ಬರೆದು, ದಾಖಲೆಗಳನ್ನು ಸಲ್ಲಿಸಿ ಭೂತಾನ್ ಮತ್ತು ಅದರ ಪ್ರದೇಶವಾದ ಸಕ್ಟೆಂಗ್ ವನ್ಯಜೀವಿ ಅಭಯಾರಣ್ಯದ ಸಾರ್ವಭೌಮತ್ವ ಪ್ರಶ್ನಿಸುವ ಉಲ್ಲೇಖಗಳನ್ನು ವಿರೋಧಿಸಿದೆ.

By

Published : Jul 6, 2020, 12:12 PM IST

Published : Jul 6, 2020, 12:12 PM IST

bhuthan
bhuthan

ನವದೆಹಲಿ:ಚೀನಾ ತನ್ನ ವಿಸ್ತರಣಾ ಕಾರ್ಯಸೂಚಿಯನ್ನ ಮುಂದುವರಿಸಿದ್ದು, ಭಾರತದ ಸಾಂಪ್ರದಾಯಿಕ ಮಿತ್ರರಾಷ್ಟ್ರಗಳಲ್ಲಿ ಒಂದಾದ ಭೂತಾನ್‌ನೊಂದಿಗೆ ಹೊಸ ಗಡಿ ವಿವಾದ ಸೃಷ್ಟಿಸಿದೆ.

ಜೂನ್ ಮೊದಲ ವಾರದಲ್ಲಿ ನಡೆದ ಗ್ಲೋಬಲ್ ಎನ್ವಿರಾನ್ಮೆಂಟ್ ಫೆಸಿಲಿಟಿಯ (ಜಿಇಎಫ್) ವರ್ಚುವಲ್ ಸಭೆಯಲ್ಲಿ, ಭಾರತ ಮತ್ತು ಚೀನಾ ಗಡಿಯಲ್ಲಿರುವ ಪೂರ್ವ ಭೂತಾನ್‌ನ ಟ್ರಾಶಿಗಾಂಗ್ ಜಿಲ್ಲೆಯ ಸಕ್ಟೆಂಗ್ ವನ್ಯಜೀವಿ ಅಭಯಾರಣ್ಯಕ್ಕೆ (ಎಸ್‌ಡಬ್ಲ್ಯುಎಸ್) ಅನುದಾನ ನೀಡುವುದನ್ನು ಚೀನಾ ಆಕ್ಷೇಪಿಸಿ, ಈ ಸ್ಥಳವು ವಿವಾದಾಸ್ಪದವಾಗಿದೆ ಎಂದು ಹೇಳಿತ್ತು.

ಜಿಇಎಫ್ ಕೌನ್ಸಿಲ್ ಪ್ರಪಂಚದಾದ್ಯಂತದ ವಿವಿಧ ಪರಿಸರ ಯೋಜನೆಗಳಿಗೆ ಧನಸಹಾಯ ನೀಡುವ ಬಗ್ಗೆ ತೀರ್ಮಾನಿಸಿ, ಚೀನಾದ ಆಕ್ಷೇಪಣೆಯಿಂದ ಆಘಾತಕ್ಕೊಳಗಾಗಿತ್ತು.

ಜಿಇಎಫ್ ಕೌನ್ಸಿಲ್ ಸದಸ್ಯರಲ್ಲಿ ಹೆಚ್ಚಿನವರು ಭೂತಾನ್ ದೃಷ್ಟಿಕೋನ ಬೆಂಬಲಿಸಿ, ಅದನ್ನು ಅಂಗೀಕರಿಸಿ, ಚೀನಾದ ಕೌನ್ಸಿಲ್ ಸದಸ್ಯರ ಆಕ್ಷೇಪಣೆಯ ಹೊರತಾಗಿಯೂ ಯೋಜನೆ ಅಂಗೀಕರಿಸಲಾಯಿತು.

ಭೂತಾನ್ ಸರ್ಕಾರವು ಜಿಇಎಫ್ ಕೌನ್ಸಿಲ್​ಗೆ ಪತ್ರ ಬರೆದು, ದಾಖಲೆಗಳನ್ನು ಸಲ್ಲಿಸಿ ಭೂತಾನ್ ಮತ್ತು ಅದರ ಪ್ರದೇಶವಾದ ಸಕ್ಟೆಂಗ್ ವನ್ಯಜೀವಿ ಅಭಯಾರಣ್ಯದ ಸಾರ್ವಭೌಮತ್ವವನ್ನು ಪ್ರಶ್ನಿಸುವ ಉಲ್ಲೇಖಗಳನ್ನು ವಿರೋಧಿಸಿದೆ. ಚೀನಾದ ಆಧಾರರಹಿತ ಹಕ್ಕುಗಳ ಯಾವುದೇ ಉಲ್ಲೇಖಗಳನ್ನು ಪರಿಗಣಿಸದಂತೆ ಭೂತಾನ್ ಜಿಇಎಫ್ ಕೌನ್ಸಿಲ್​ಗೆ ಒತ್ತಾಯಿಸಿದೆ.

1984ರಿಂದ ಭೂತಾನ್ ಮತ್ತು ಚೀನಾ ಗಡಿ ವಿವಾದವನ್ನು ಹೊಂದಿವೆ. ಭೂತಾನ್ ಮತ್ತು ಚೀನಾ ಮೂರು ಪ್ರದೇಶಗಳಿಗೆ ಸೀಮಿತವಾಗಿದೆ. ಉತ್ತರ ಭೂತಾನ್​ನ ಜಕರ್ಲುಂಗ್ ಮತ್ತು ಪಾಸಮ್ಲುಂಗ್ ಪ್ರದೇಶಗಳಲ್ಲಿ ಮತ್ತು ಪಶ್ಚಿಮ ಭೂತಾನ್‌ನಲ್ಲಿ ಒಂದು ಪ್ರದೇಶದ ಕುರಿತು ಹಲವು ವರ್ಷಗಳಿಂದ ವಿವಾದ ನಡೆಯುತ್ತಿದೆ. ಆದರೆ ಸಕ್ಟೆಂಗ್ ವನ್ಯಜೀವಿ ಅಭಯಾರಣ್ಯ ಈ ಮೂರು ವಿವಾದಿತ ಪ್ರದೇಶಗಳ ಭಾಗವಲ್ಲ.

ABOUT THE AUTHOR

...view details