ಕರ್ನಾಟಕ

karnataka

ETV Bharat / international

ಢಾಕಾದ ಸ್ಲಮ್​ನಲ್ಲಿ ಭಾರೀ ಬೆಂಕಿ ಅವಘಡ: ನೂರಾರು ಗುಡಿಸಲುಗಳು ನಾಶ

ಬಾಂಗ್ಲಾದೇಶದ ಢಾಕಾ ನಗರದ ಕೊಳಗೇರಿಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಬಡ ಜನರ ಗುಡಿಸಲುಗಳು ಬೆಂಕಿಗಾಹುತಿಯಾಗಿವೆ.

Massive fire rips through B'desh slum
ಡಾಕಾದ ಸ್ಲಮ್​ನಲ್ಲಿ ಭಾರೀ ಬೆಂಕಿ ಅವಘಡ

By

Published : Jun 8, 2021, 1:11 PM IST

ಢಾಕಾ (ಬಾಂಗ್ಲಾದೇಶ) : ನಗರ ಅತೀ ದೊಡ್ಡ ಕೊಳಗೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 100 ಕ್ಕಿಂತ ಅಧಿಕ ಗುಡಿಸಲುಗಳು ನಾಶವಾಗಿರುವ ಬಗ್ಗೆ ವರದಿಯಾಗಿದೆ.

ಢಾಕಾ ನಗರದ ಮೊಖಾಹಲಿ ಪ್ರದೇಶದ ಸಾತ್ ತೋಲಾ ಕೊಳಗೇರಿಯಲ್ಲಿ ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಬೆಂಕಿ ನಂದಿಸಲು ಒಟ್ಟು 18 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ದಳದ ಪ್ರಧಾನ ಅಧಿಕಾರಿ ಲಿಮಾ ಖಾನೊಮ್ ತಿಳಿಸಿದ್ದಾರೆ. ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಬೆಂಕಿ ಅವಘಡ ಸಂಭವಿಸಿದ ಪ್ರದೇಶ ಭಾರೀ ಜನನಿಬಿಡ ಪ್ರದೇಶವಾಗಿದ್ದು, ಒಂದಕ್ಕೊಂದು ಅಂಟಿಕೊಂಡಂತೆ ಮನೆಗಳಿವೆ. ಇಲ್ಲಿನ ಬಹುತೇಕ ಮನೆಗಳು ಬಡ ಜನರದ್ದಾಗಿವೆ. ಬೆಂಕಿ ಅವಘಡದ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಇಲಾಖೆಯ ಉಪನಿರ್ದೇಶಕ ದೇಬಾಶಿಶ್ ಬರ್ಧನ್ ಅವರು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ 3.59 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಮತ್ತು ಶೀಘ್ರದಲ್ಲೇ ಕೊಳೆಗೇರಿಯ ಸುಮಾರು 2,000 ಗುಡಿಸಲುಗಳನ್ನು ಹೊಂದಿರುವ ಪ್ರದೇಶವನ್ನು ಆವರಿಸಿದೆ. ಕಬ್ಬಿಣದ ಶೀಟ್, ಪ್ಲಾಸ್ಟಿಕ್ ಮತ್ತು ಹಲಗೆಯಿಂದ ನಿರ್ಮಿಸಲಾಗಿದ್ದ ಕನಿಷ್ಠ 100 ಗುಡಿಸಲುಗಳು ಬೆಂಕಿಗಾಹುತಿಯಾಗಿವೆ ಎಂದು ದೇಬಾಶಿಶ್ ಬರ್ಧನ್ ಮಾಹಿತಿ ನೀಡಿದ್ದಾರೆ. ಸುಮಾರು 500 ರಷ್ಟು ಗುಡಿಸಲುಗಳು ಭಾಗಶಃ ಹಾನಿಯಾಗಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂಓದಿ: ಗ್ಯಾಸ್​ ಸಿಲಿಂಡರ್ ಸ್ಫೋಟ: 8 ಮಂದಿ ಸಾವು, ಇಬ್ಬರಿಗೆ ಗಾಯ

ABOUT THE AUTHOR

...view details