ಕರ್ನಾಟಕ

karnataka

ETV Bharat / international

ಚೀನಾದ ವ್ಯಾಕ್ಸಿನ್​ ಪಡೆದ ಇಂಡೋನೇಷ್ಯಾ ವೈದ್ಯರೇ ಈಗ ಬಲಿಪಶುಗಳು..!

ಚೀನಾದ ಸಿನೋವಾಕ್‌ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ಇಂಡೋನೇಷ್ಯಾದ 20 ವೈದ್ಯರು ವೈರಸ್​ ತಗುಲಿ ಮೃತಪಟ್ಟಿದ್ದು, 358 ಆರೋಗ್ಯ ಕಾರ್ಯಕರ್ತರು ಸೋಂಕಿಗೆ ತುತ್ತಾಗಿದ್ದಾರೆ.

Indonesia's doctors becoming patients after administration of China's Sinovac COVID-19 vaccine
ಚೀನಾದ ವ್ಯಾಕ್ಸಿನ್​ ಪಡೆದ ಇಂಡೋನೇಷ್ಯಾ ವೈದ್ಯರೇ ಈಗ ಬಲಿಪಶುಗಳು

By

Published : Jun 26, 2021, 9:10 AM IST

ಜಕಾರ್ತ (ಇಂಡೋನೇಷ್ಯಾ):ಕೋವಿಡ್​ ಉಲ್ಬಣವನ್ನು ಎದುರಿಸುತ್ತಿರುವ ಇಂಡೋನೇಷ್ಯಾದಲ್ಲಿ ವೈದ್ಯರೇ ಮಹಾಮಾರಿಯ ಬಲಿಪಶುಗಳಾಗಿದ್ದಾರೆ. ಏಕೆಂದರೆ ಚೀನಾದ ಸಿನೋವಾಕ್‌ ಕೊರೊನಾ ಲಸಿಕೆ ಹಾಕಿಸಿಕೊಂಡ ವೈದ್ಯರು ಸೋಂಕಿಗೆ, ಅನಾರೋಗ್ಯಕ್ಕೆ ತುತ್ತಾಗುವುದಲ್ಲದೇ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ.

ಕಳೆದೆರಡು ದಿನಗಳಿಂದ ಇಂಡೋನೇಷ್ಯಾದಲ್ಲಿ 20,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಅತಿ ಹೆಚ್ಚು ಸಂಖ್ಯೆಯಾಗಿದೆ. ದೇಶದ ರಾಜಧಾನಿಯಾದ ಜಕಾರ್ತಾದ ಆಸ್ಪತ್ರೆಗಳಲ್ಲಿ ಮತ್ತೆ ಆಮ್ಲಜನಕ ಕೊರತೆ ಎದುರಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ದೇಶದಲ್ಲಿ ಈವರೆಗೆ 401 ವೈದ್ಯರು ಸೋಂಕಿನಿಂದ ಮೃತಪಟ್ಟಿದ್ದು, ಇವರಲ್ಲಿ 20 ಮಂದಿ ಸಿನೋವಾಕ್‌ ಲಸಿಕೆ ಪಡೆದಿದ್ದರು. ಅಲ್ಲದೇ ಇದೇ ವ್ಯಾಕ್ಸಿನ್​ ಪಡೆದಿದ್ದ 358 ಆರೋಗ್ಯ ಕಾರ್ಯಕರ್ತರಿಗೆ ಎರಡೇ ವಾರದ ಅವಧಿಯಲ್ಲಿ ವೈರಸ್​ ಅಂಟಿದೆ. ಇಂಡೋನೇಷ್ಯಾದಲ್ಲಿ ಶೇ. 5ಕ್ಕಿಂತ ಕಡಿಮೆ ಜನಸಂಖ್ಯೆಗೆ ಲಸಿಕೆ ನೀಡಲಾಗಿದ್ದರೆ ಇವರಲ್ಲಿ ಬಹುಪಾಲು ಮಂದಿ ಸಿನೋವಾಕ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಇದೀಗ ಈ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಅನುಮಾನಗಳು ಹುಟ್ಟುಕೊಂಡಿವೆ. ಅದರಲ್ಲಿಯೂ ಡೆಲ್ಟಾ ರೂಪಾಂತರ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ವಿರುದ್ಧ ಈ ಲಸಿಕೆ ಯಾವ ಪ್ರಯೋಜನಕ್ಕೂ ಬಾರದೆಂದು ಹೇಳಲಾಗ್ತಿದೆ.

ಇದನ್ನೂ ಓದಿ: ಚೀನಾ ಸರಕುಗಳಂತೆ ಅಲ್ಲಿನ ಲಸಿಕೆಯೂ ಕಳಪೆ: ಹಲವು ದೇಶಗಳಲ್ಲಿ ಕೋವಿಡ್ ಉಲ್ಬಣ

ಇತ್ತ ಚೀನಾದ ಕೋವಿಡ್​ ಲಸಿಕೆಗಳ ಮೇಲೆ ಅವಲಂಬಿತರಾಗಿದ್ದ ಚಿಲಿ, ಸೀಚೆಲ್ಸ್, ಮಂಗೋಲಿಯಾ ಮತ್ತು ಬಹ್ರೇನ್​ನಲ್ಲಿ ಬಹುಪಾಲು ಜನರಿಗೆ ವ್ಯಾಕ್ಸಿನ್​ ನೀಡಿದ ಬಳಿಕವೂ ​ಮತ್ತೆ ಸಾಂಕ್ರಾಮಿಕ ಉಲ್ಬಣಿಸಿರುವುದು ವರದಿಯಾಗಿದೆ.

ದೇಶೀಯವಾಗಿ ಅಭಿವೃದ್ಧಿಪಡಿಸಿದ ಏಳು ಲಸಿಕೆಗಳನ್ನು ಚೀನಾ ಅನುಮೋದಿಸಿದೆ. ಇವುಗಳಲ್ಲಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಲಭ್ಯವಿರುವ ಸಿನೋವಾಕ್ ಮತ್ತು ಸಿನೊಫಾರ್ಮ್ ಸಂಸ್ಥೆ ಅಭಿವೃದ್ಧಿಪಡಿಸಿದ ​ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ(WHO) ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಸಿನೋವಾಕ್‌ನ ಕೊರೊನಾವಾಕ್ ಲಸಿಕೆಯು ಶೇ.51ರಷ್ಟು ಹಾಗೂ ಸಿನೊಫಾರ್ಮ್ ಲಸಿಕೆಯು ಶೇ.79ರಷ್ಟು ಮಾತ್ರ ಪರಿಣಾಮಕಾರಿತ್ವವನ್ನು ಹೊಂದಿದೆ.

ABOUT THE AUTHOR

...view details