ಕರ್ನಾಟಕ

karnataka

53 ಮಂದಿಯಿದ್ದ ಇಂಡೋನೇಷ್ಯಾ ಸಬ್​ಮೆರಿನ್ ಬಾಲಿ ಬಳಿ ಕಣ್ಮರೆ!

ಬಾಲಿಯ ಉತ್ತರಕ್ಕೆ ಸುಮಾರು 60 ಮೈಲಿ (95 ಕಿಲೋಮೀಟರ್) ನೀರಿನಲ್ಲಿ ಜಲಾಂತರ್ಗಾಮಿ ನೌಕೆ ಕಣ್ಮರೆಯಾಗಿದೆ ಎಂದು ಹೇಳಲಾಗಿದೆ. ಆ ಜಲಾಂತರ್ಗಾಮಿ ನೌಕೆಯನ್ನು ಹುಡುಕಲು ನೌಕಾಪಡೆಯು ಯುದ್ಧನೌಕೆಗಳನ್ನು ನಿಯೋಜಿಸಿದೆ..

By

Published : Apr 21, 2021, 7:17 PM IST

Published : Apr 21, 2021, 7:17 PM IST

ಸಬ್​ಮೆರಿನ್
ಸಬ್​ಮೆರಿನ್

ಜಕಾರ್ತಾ :ರೆಸಾರ್ಟ್ ದ್ವೀಪವಾದ ಬಾಲಿ ಬಳಿ ಇಂಡೋನೇಷ್ಯಾ ನೌಕಾಪಡೆಯ ಜಲಾಂತರ್ಗಾಮಿ ನೌಕೆಯು ಕಾಣೆಯಾಗಿದೆ ಎಂದು ಇಂಡೋನೇಷ್ಯಾದ ಮಿಲಿಟರಿ ತಿಳಿಸಿದೆ.

53 ಜನರಿದ್ದ ಕೆಆರ್‌ಐ ನಂಗಲ 402 ಸಬ್​ಮೆರಿನ್ ಬುಧವಾರ ತರಬೇತಿ ವ್ಯಾಯಾಮದಲ್ಲಿ ಭಾಗವಹಿಸಿತ್ತು. ಆದರೆ, ಶೆಡ್ಯೂಲ್​ ರಿಪೊರ್ಟ್​ಗೆ ಕರೆ ಮಾಡಿದಾಗ ಅದು ಸಿಗ್ನಲ್​ ಸಿಗದೆ ತಪ್ಪಿಸಿಕೊಂಡಿದೆ ಎಂದು ಮಿಲಿಟರಿ ಮುಖ್ಯಸ್ಥ ಹಾಡಿ ಟ್ಜಾಜಾಂಟೊ ಮಾಹಿತಿ ನೀಡಿದ್ದಾರೆ.

ಬಾಲಿಯ ಉತ್ತರಕ್ಕೆ ಸುಮಾರು 60 ಮೈಲಿ (95 ಕಿಲೋಮೀಟರ್) ನೀರಿನಲ್ಲಿ ಜಲಾಂತರ್ಗಾಮಿ ನೌಕೆ ಕಣ್ಮರೆಯಾಗಿದೆ ಎಂದು ಹೇಳಲಾಗಿದೆ. ಆ ಜಲಾಂತರ್ಗಾಮಿ ನೌಕೆಯನ್ನು ಹುಡುಕಲು ನೌಕಾಪಡೆಯು ಯುದ್ಧನೌಕೆಗಳನ್ನು ನಿಯೋಜಿಸಿದೆ.

ಅಲ್ಲದೆ ಜಲಾಂತರ್ಗಾಮಿ ಪಾರುಗಾಣಿಕಾ ಹಡಗುಗಳನ್ನು ಹೊಂದಿರುವ ಸಿಂಗಾಪುರ ಮತ್ತು ಆಸ್ಟ್ರೇಲಿಯಾದಿಂದ ಸಹಾಯ ಕೇಳಲಾಗಿದೆ ಎಂದು ಟ್ಜಾಜಾಂಟೊ ಹೇಳಿದ್ದಾರೆ. ಇಂಡೋನೇಷ್ಯಾ ಪ್ರಸ್ತುತ ಐದು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ. 2024ರ ವೇಳೆಗೆ ಕನಿಷ್ಠ ಎಂಟು ನೌಕೆ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ.

ABOUT THE AUTHOR

...view details