ಕರ್ನಾಟಕ

karnataka

ಬುಶ್ರಾ ನನ್ನ ಆತ್ಮದ ಸಂಗಾತಿ, ಅವಳಿಲ್ಲದೇ ನಾನು ಬದುಕಲ್ಲ: 3ನೇ ಪತ್ನಿ ಬಣ್ಣಿಸಿದ ಪಾಕ್ ಪ್ರಧಾನಿ ಇಮ್ರಾನ್​

ಓರ್ವ ಮೂರ್ಖ ಮಾತ್ರ ತನ್ನ ಹೆಂಡತಿಯೊಂದಿಗೆ ಎಲ್ಲದರ ಬಗ್ಗೆ ಮಾತನಾಡುವುದಿಲ್ಲ ಎಂದ ಇಮ್ರಾನ್ ತಮ್ಮ ಹೆಂಡತಿಯನ್ನು 'ಆತ್ಮದ ಸಂಗಾತಿ ಮತ್ತು ಒಡನಾಡಿ, ನಾನು ಅವಳಿಲ್ಲದೇ ಬದುಕುತ್ತಿರಲಿಲ್ಲ' ಎಂದು ಬಣ್ಣಿಸಿದ್ದಾರೆ.

By

Published : Oct 31, 2020, 5:29 PM IST

Published : Oct 31, 2020, 5:29 PM IST

Imran
ಇಮ್ರಾನ್​

ಇಸ್ಲಾಮಾಬಾದ್​: ಬುಶ್ರಾ ಬೀಬಿ ಇಲ್ಲದೇ ನಾನು ಬದುಕಲು ಸಾಧ್ಯವಿಲ್ಲ. ಆಕೆ ಬಹಳ ಬುದ್ಧಿವಂತಳು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಪತ್ನಿಯ ಗುಣಗಾನ ಮಾಡಿದ್ದಾರೆ.

ಬುಶ್ರಾ ಬೀಬಿ ಖಾನ್ ಅವರ ಮೂರನೇ ಪತ್ನಿ ಆಗಿದ್ದು, ಪ್ರಧಾನ ಮಂತ್ರಿ ಆಗುವ ಆರು ತಿಂಗಳ ಮೊದಲು ವಿವಾಹವಾಗಿದ್ದರು.

ಜರ್ಮನ್ ಪತ್ರಿಕೆ ಡೆರ್ ಸ್ಪೀಗೆಲ್ ಜತೆ ಮಾತನಾಡಿದ ಇಮ್ರಾನ್, ನಾನು ಅವಳೊಂದಿಗೆ ಎಲ್ಲವನ್ನೂ ಚರ್ಚಿಸುತ್ತೇನೆ. ಸರ್ಕಾರದಲ್ಲಿ ನಾನು ಎದುರಿಸುತ್ತಿರುವ ತೊಂದರೆಗಳು, ಕಠಿಣ ಸಂದರ್ಭಗಳನ್ನು ನಿಭಾಯಿಸುವುದನ್ನು ಅವಳೊಂದಿಗೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

ಓರ್ವ ಮೂರ್ಖ ಮಾತ್ರ ತನ್ನ ಹೆಂಡತಿಯೊಂದಿಗೆ ಎಲ್ಲದರ ಬಗ್ಗೆ ಮಾತನಾಡುವುದಿಲ್ಲ ಎಂದ ಇಮ್ರಾನ್ ತಮ್ಮ ಹೆಂಡತಿಯನ್ನು 'ಆತ್ಮದ ಸಂಗಾತಿ ಮತ್ತು ಒಡನಾಡಿ, ನಾನು ಅವಳಿಲ್ಲದೇ ಬದುಕುತ್ತಿರಲಿಲ್ಲ' ಎಂದು ಬಣ್ಣಿಸಿದ್ದಾರೆ.

ABOUT THE AUTHOR

...view details