ಕರ್ನಾಟಕ

karnataka

ETV Bharat / international

ಭಾರತ ಪಾಕ್​ ಸಂಬಂಧ: ಇಮ್ರಾನ್​ ಖಾನ್​ ನೇತೃತ್ವದಲ್ಲಿ ಇಂದು ಮಹತ್ವದ ಸಭೆ - ಪಾಕ್ - ಭಾರತ ಸಂಬಂಧ

ಇಂದು ಪಾಕ್ - ಭಾರತ ಸಂಬಂಧಗಳ ಕುರಿತ ಮಹತ್ವದ ಸಭೆಯ ಅಧ್ಯಕ್ಷತೆಯನ್ನು ಇಮ್ರಾನ್ ಖಾನ್ ವಹಿಸಲಿದ್ದಾರೆ. ಸಭೆಯಲ್ಲಿ ಗೃಹ, ವಿದೇಶಾಂಗ ವ್ಯವಹಾರ, ಯೋಜನೆ ಮತ್ತು ಮಾನವ ಹಕ್ಕುಗಳ ಸಚಿವರು ಭಾಗವಹಿಸಲಿದ್ದಾರೆ.

ಭಾರತ ಪಾಕ್​ ಸಂಬಂಧ: ಇಮ್ರಾನ್​ ಖಾನ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ಇಸ್ಲಾಮಾಬಾದ್
ಭಾರತ ಪಾಕ್​ ಸಂಬಂಧ: ಇಮ್ರಾನ್​ ಖಾನ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ಇಸ್ಲಾಮಾಬಾದ್

By

Published : Apr 2, 2021, 8:22 AM IST

Updated : Apr 2, 2021, 9:46 AM IST

ಇಸ್ಲಾಮಾಬಾದ್​(ಪಾಕಿಸ್ತಾನ): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಂದು ಭಾರತ- ಪಾಕಿಸ್ತಾನ ನಡುವಣ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಸಭೆ ಕರೆದಿದ್ದಾರೆ. ಕ್ಯಾಬಿನೆಟ್ ಸಚಿವರು ಈ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ಸಭೆಯಲ್ಲಿ ಭಾರತದೊಂದಿಗಿನ ಸಂಬಂಧ ಸುಧಾರಿಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಪಾಕ್ - ಭಾರತ ಸಂಬಂಧಗಳ ಕುರಿತ ಮಹತ್ವದ ಸಭೆಯ ಅಧ್ಯಕ್ಷತೆಯನ್ನು ಇಮ್ರಾನ್ ಖಾನ್ ವಹಿಸಲಿದ್ದಾರೆ. ಸಭೆಯಲ್ಲಿ ಗೃಹ, ವಿದೇಶಾಂಗ ವ್ಯವಹಾರ, ಯೋಜನೆ ಮತ್ತು ಮಾನವ ಹಕ್ಕುಗಳ ಸಚಿವರು ಭಾಗವಹಿಸಲಿದ್ದಾರೆ. ಈ ಸಭೆಯು ಭಾರತದೊಂದಿಗಿನ ಸಂಬಂಧ ಸುಧಾರಣೆಯ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.

ಇಂದು ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಪಾಕಿಸ್ತಾನವು ಭಾರತದೊಂದಿಗೆ ವ್ಯಾಪಾರ ಪ್ರಾರಂಭಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಚರ್ಚಿಸುತ್ತದೆ ಎಂದು ಇನ್ನೊಂದು ಟ್ವೀಟ್​ ನಲ್ಲಿ ಮಾಹಿತಿ ನೀಡಿದ್ದಾರೆ

Last Updated : Apr 2, 2021, 9:46 AM IST

ABOUT THE AUTHOR

...view details