ಕರ್ನಾಟಕ

karnataka

ಮುಷರಫ್​ಗೆ ಮರಣ ದಂಡನೆ: ಹೈಕೋರ್ಟ್​ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್​ಗೆ ವಿಶೇಷ ನ್ಯಾಯಾಲಯ ಮರಣದಂಡನೆ ನೀಡುವುದು ಅಸಾಂವಿಧಾನಿಕ ಎಂದು ಲಾಹೋರ್ ಹೈಕೋರ್ಟ್ (ಎಲ್‌ಎಚ್‌ಸಿ) ತೀರ್ಪು ಪ್ರಶ್ನಿಸಿ ಪಾಕಿಸ್ತಾನ ಬಾರ್ ಕೌನ್ಸಿಲ್ (ಪಿಬಿಸಿ) ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

By

Published : Mar 6, 2020, 12:47 PM IST

Published : Mar 6, 2020, 12:47 PM IST

Pervez Musharraf, Former President of Pakistan
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್

ಲಾಹೋರ್​:ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್​ಗೆ ವಿಶೇಷ ನ್ಯಾಯಾಲಯ ಮರಣದಂಡನೆ ನೀಡುವುದು ಅಸಾಂವಿಧಾನಿಕ ಎಂದು ಲಾಹೋರ್ ಹೈಕೋರ್ಟ್ (ಎಲ್‌ಎಚ್‌ಸಿ) ತೀರ್ಪನ್ನು ಪ್ರಶ್ನಿಸಿ ಪಾಕಿಸ್ತಾನ ಬಾರ್ ಕೌನ್ಸಿಲ್ (ಪಿಬಿಸಿ) ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ನಿನ್ನೆ ಈ ಕುರಿತು ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ತೀರ್ಪನ್ನು ಕಡೆಗಣಿಸುವಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ವಿಶೇಷ ನ್ಯಾಯಾಲಯವು ನೀಡಿದ ಆದೇಶದ ವಿರುದ್ಧ ಮುಷರಫ್ ಸಲ್ಲಿಸಿದ ಸಾಂವಿಧಾನಿಕ ಅರ್ಜಿಯನ್ನು ಎಲ್‌ಎಚ್‌ಸಿ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಒಪ್ಪಿಕೊಳ್ಳುತ್ತದೆ ಎಂದು ಪ್ರಶ್ನಿಸಿದೆ.

ನವೆಂಬರ್ 3, 2007 ರಂದು ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದಕ್ಕೆ ಮಾಜಿ ರಾಷ್ಟ್ರಪತಿ ಅವರನ್ನ ದೇಶದ್ರೋಹದ ಅಪರಾಧಿ ಎಂದು ಘೋಷಿಸಿ ಮರಣದಂಡನೆಗೆ ಗುರಿ ಮಾಡಿತ್ತು. ಕೋರ್ಟ್​ ಈ ನಿರ್ಣಯವನ್ನ ಪ್ರಶ್ನಿಸಿ ಪಾಕಿಸ್ತಾನ ಬಾರ್ ಕೌನ್ಸಿಲ್ (ಪಿಬಿಸಿ) ಈ ಅರ್ಜಿ ಸಲ್ಲಿಕೆ ಮಾಡಿದೆ.

ABOUT THE AUTHOR

...view details