ಕರ್ನಾಟಕ

karnataka

ಡ್ರ್ಯಾಗನ್​ ನಾಡಲ್ಲಿ ಮರಣ ಮೃದಂಗ... ಕೊರೋನಾಗೆ ಬಲಿಯಾದವರ ಸಂಖ್ಯೆ 722 ಕ್ಕೆ ಏರಿಕೆ

ಚೀನಾದಲ್ಲಿ ಕೊರೋನಾ ವೈರಸ್​ಗೆ ಬಲಿಯಾದವರ ಸಂಖ್ಯೆ ಶನಿವಾರದಂದು 722ಕ್ಕೆ ಏರಿಕೆಯಾಗಿದೆ.

By

Published : Feb 8, 2020, 10:16 AM IST

Published : Feb 8, 2020, 10:16 AM IST

corona-virus
corona-virus

ಬೀಜಿಂಗ್​(ಚೀನಾ): ಚೀನಾದಲ್ಲಿ ಕೊರೋನಾ ತನ್ನ ಕಬಂಧಬಾಹುಗಳನ್ನು ಚಾಚಿದ್ದು, ಕೊರೋನಾ ವೈರಸ್​ಗೆ ಬಲಿಯಾದವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇತ್ತೀಚಿನ ವರದಿ ಪ್ರಕಾರ ಕೊರೋನಾ ವೈರಸ್​ನಿಂದಾಗಿ ಪ್ರಾಣಬಿಟ್ಟವರ ಸಂಖ್ಯೆ ಶನಿವಾರದಂದು 722ಕ್ಕೆ ಏರಿಕೆಯಾಗಿದೆ. ಇದಲ್ಲದೇರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರಇನ್ನೂ 86 ಜನರು ಸಹ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಎರಡು ದಶಕಗಳ ಹಿಂದೆ ಚೀನಾದ ಮೇನ್​ಲ್ಯಾಂಡ್​ ಮತ್ತು ಹಾಂಗ್​ಕಾಂಗ್​ನ್ನು ಭಾಧಿಸಿದ ಸಿವಿಯರ್​ ಅಕ್ಯುಟ್​ ರೆಸ್ಪಿರೆಟರಿ ಸಿಂಡ್ರೋಮ್​ ರೋಗವನ್ನು ಮೀರಿಸುವ ರೋಗ ಇದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹುಬೈ ಪ್ರಾಂತ್ಯದಲ್ಲಿ ಡಿಸೆಂಬರ್‌ನಲ್ಲಿ ಈ ರೋಗವು ಹರಡಿತ್ತು.ರಾಷ್ಟ್ರೀಯ ಆರೋಗ್ಯ ಆಯೋಗದದೈನಂದಿನ ವರದಿಯು ಇನ್ನೂ 3,399 ಹೊಸ ಸೋಂಕು ಪೀಡಿತರನ್ನು ಧೃಡಪಡಿಸಿದ್ದು. ದೇಶಾದ್ಯಂತ ಈಗ 34,500 ಕ್ಕೂ ಹೆಚ್ಚು ಜನ ಸೋಂಕು ಪೀಡಿತರಿದ್ದರೆ ಎಂದು ತಿಳಿಸಿದೆ.

ಡಿಸೆಂಬರ್‌ನಲ್ಲಿ ಕೊರೋನಾ ವೈರಸ್‌ ಬಗ್ಗೆ ಎಚ್ಚರಿಕೆ ನೀಡಿದ ವೈದ್ಯನಿಗೆ ಚೀನಾ ಸರ್ಕಾರ ಶಿಕ್ಷೆ ನೀಡಿತ್ತು. ಆದರೆ 34 ವರ್ಷದವುಹಾನ್ ಪ್ರಾಂತ್ಯದ ಆ ವೈದ್ಯ ಕೊರೋನಾದಿಂದಲೇ ಶುಕ್ರವಾರ ಸಾವನ್ನಪ್ಪಿದ್ದು, ಅಂದು ಸರ್ಕಾರ ತೆಗೆದುಕೊಂಡ ಕ್ರಮದ ಕುರಿತು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊರೋನಾ ವೈರಸ್‌ ಕೂಡ ಸಾರ್ಸ್​ ರೋಗ ಲಕ್ಷಣವನ್ನು ಹೊಂದಿದೆ. SARS (Severe Acute Respiratory Syndrome). 2002-2003ರಲ್ಲಿ ಚೀನಾ ಮತ್ತು ಹಾಂಗ್ ಕಾಂಗ್​ನಲ್ಲಿ ಸುಮಾರು 650 ಜನರು ಮತ್ತು ವಿಶ್ವದಾದ್ಯಂತ 120 ಕ್ಕೂ ಹೆಚ್ಚು ಜನರನ್ನು ಸಾರ್ಸ್​​ ರೋಗ ಬಲಿ ಪಡೆದಿತ್ತು.

ABOUT THE AUTHOR

...view details