ಕರ್ನಾಟಕ

karnataka

ಚೀನಾದಲ್ಲಿ ಕೊರನಾ ವೈರಸ್​, ನಿತ್ಯ 100 ಸಾವು, 1,100 ಗಡಿದಾಟಿದ ಮೃತರ ಸಂಖ್ಯೆ

ಮಹಾಮಾರಿ ಕೊರೊನಾಗೆ ಸಾವಿನ ಸಂಖ್ಯೆ ಚೀನಾದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗ್ತಿದ್ದು, ಇದೀಗ ಅದು 1100 ಗಡಿ ದಾಟಿದೆ.

By

Published : Feb 12, 2020, 8:27 AM IST

Published : Feb 12, 2020, 8:27 AM IST

Updated : Feb 12, 2020, 9:07 AM IST

CoronaVirus
CoronaVirus

ಬೀಜಿಂಗ್​:ಮಹಾಮಾರಿ ಕೊರೊನಾ ವೈರಸ್​ಗೆ ಚೀನಾದಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗ್ತಿದ್ದು, ನಿತ್ಯ ನೂರಾರು ಅಮಾಯಕರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ.

ನಿನ್ನೆ ಒಂದೇ ದಿನ 100ಕ್ಕೂ ಹೆಚ್ಚು ಜನರು ಈ ಮಹಾಮಾರಿಗೆ ಬಲಿಯಾಗಿದ್ದು, ಇದೀಗ ಸಾವಿನ ಸಂಖ್ಯೆ 1100ರ ಗಡಿ ದಾಟಿದೆ. ಹೊಸದಾಗಿ 1,638ಮಂದಿಗೆ ಈ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 33,400ಕ್ಕೆ ಏರಿಕೆಯಾಗಿದೆ.

ಮಾರಣಾಂತಿಕ ಕೊರೊನಾ ವೈರಸ್​ಗೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್​​​-19 ಎಂದು ಅಧಿಕೃತವಾಗಿ ಹೆಸರಿಟ್ಟಿದ್ದು, ಇದೇ ವೇಳೆ, ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ತಜ್ಞ ವೈದ್ಯರ ತಂಡವೊಂದು ಚೀನಾಕ್ಕೆ ಆಗಮಿಸಿದ್ದು ರೋಗ ನಿಯಂತ್ರಣಕ್ಕೆ ಸೂಕ್ತ ನೆರವು ನೀಡುತ್ತಿದೆ.

Last Updated : Feb 12, 2020, 9:07 AM IST

ABOUT THE AUTHOR

...view details