ಕರ್ನಾಟಕ

karnataka

ETV Bharat / international

'ಅಪರಿಚಿತ ನ್ಯುಮೋನಿಯಾ' ತುಂಬಾ ಅಪಾಯಕಾರಿ​: ಚೀನಾ ಆರೋಪ ತಳ್ಳಿಹಾಕಿದ ಕಜಕಿಸ್ತಾನ - ಚೀನಾ

ಕಜಕಿಸ್ತಾನದಲ್ಲಿ ಮತ್ತೊಂದು ನ್ಯುಮೋನಿಯಾ ಸೋಂಕು ಕಂಡುಬಂದಿದ್ದು, ಕಳೆದ ಆರು ತಿಂಗಳಲ್ಲಿ 1,772 ಜನರು ಈ ಕಾಯಿಲೆಗೆ ಬಲಿಯಾಗಿದ್ದಾರೆ. ಇದು ಕೋವಿಡ್​​ಗಿಂತ ಹೆಚ್ಚು ಅಪಾಯಕಾರಿ ಎಂದು ಚೀನಾ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ.

pneumonia
ನ್ಯುಮೋನಿಯಾ

By

Published : Jul 10, 2020, 6:59 PM IST

ನೂರ್​ ಸುಲ್ತಾನ್​(ಕಜಕಿಸ್ತಾನ)​​: ಕೊರೊನಾಗಿಂತಲೂ ಅಪಾಯಕಾರಿಯಾದ ಕಾಯಿಲೆಯೊಂದು ಕಜಕಿಸ್ತಾನದಲ್ಲಿ ಪತ್ತೆಯಾಗಿದೆ ಎಂದು ಚೀನಾ ಎಚ್ಚರಿಕೆ ನೀಡಿದೆ. ಆದ್ರೆ ಇದನ್ನು ಕಜಕಿಸ್ತಾನ ತಳ್ಳಿಹಾಕಿದೆ.

ಕಜಕಿಸ್ತಾನದಲ್ಲಿ ಅಪರಿಚಿತ ನ್ಯುಮೋನಿಯಾ ಸೋಂಕು ಕಂಡುಬಂದಿದ್ದು, ಜೂನ್​ನಲ್ಲೇ 600 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಇದು ಕೋವಿಡ್​​ಗಿಂತ ಹೆಚ್ಚು ಅಪಾಯಕಾರಿ ಎಂದು ಚೀನಾ ರಾಯಭಾರ ಕಚೇರಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಈ ಮಾಹಿತಿಯನ್ನು ಕಜಕಿಸ್ತಾನ ಆರೋಗ್ಯ ಸಚಿವಾಲಯ ತಳ್ಳಿ ಹಾಕಿದೆ.

2020ರ ಮೊದಲ ಭಾಗ, ಅಂದರೆ ಕಳೆದ ಆರು ತಿಂಗಳಲ್ಲಿ 1,772 ಜನರು ಈ ಕಾಯಿಲೆಗೆ ಬಲಿಯಾಗಿದ್ದು, ಜೂನ್​ ತಿಂಗಳೊಂದರಲ್ಲೇ 628 ಸಾವುಗಳು ವರದಿಯಾಗಿವೆ ಎಂದು ಚೀನಾ ರಾಯಭಾರ ಕಚೇರಿ ಹೇಳಿತ್ತು. ದೇಶದ ಆರೋಗ್ಯ ಇಲಾಖೆಗಳು ನ್ಯುಮೋನಿಯಾ ಸೋಂಕಿನ ಬಗ್ಗೆ ತುಲನಾತ್ಮಕ ಸಂಶೋಧನೆ ನಡೆಸುತ್ತಿವೆ. ಆದರೆ ಇನ್ನೂ ವೈರಸ್ ಅನ್ನು ಗುರುತಿಸಲಾಗಿಲ್ಲ. ಈ ಕಾಯಿಲೆಯಿಂದ ಮೃತಪಡುವವರ ಪ್ರಮಾಣ ಕೊರೊನಾಗೆ ಬಲಿಯಾದವರ ಸಂಖ್ಯೆಗಿಂತಲೂ ಅಧಿಕವಾಗಲಿದೆ ಎಂದು ಸೌತ್​ ಚೀನಾ ಮಾರ್ನಿಂಗ್​ ಪೋಸ್ಟ್​ ವರದಿ ಮಾಡಿದೆ.

ಪ್ರತಿನಿತ್ಯ ನ್ಯುಮೋನಿಯಾದಿಂದ ಬಳಲುತ್ತಿರುವ ಸುಮಾರು 300 ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಕಜಕಿಸ್ತಾನದ ಆರೋಗ್ಯ ರಕ್ಷಣಾ ವಿಭಾಗದ ಮುಖ್ಯಸ್ಥ ಸೌಲ್ ಕಿಸಿಕೋವಾ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ABOUT THE AUTHOR

...view details