ಕರ್ನಾಟಕ

karnataka

ಯುಎಸ್‌ನಲ್ಲಿ ಕೋವಿಡ್ ಮೂಲದ ಪತ್ತೆಗಾಗಿ ಚೀನಾ ಕರೆ

ವುಹಾನ್‌ನಲ್ಲಿ ಡಬ್ಲ್ಯುಎಚ್‌ಒ ತನಿಖೆಯ ನಂತರ ಯುಎಸ್‌ನಲ್ಲಿ ಕೋವಿಡ್ ಮೂಲದ ಪತ್ತೆಗಾಗಿ ಚೀನಾ ಕರೆ ನೀಡಿದೆ.

By

Published : Feb 19, 2021, 3:25 PM IST

Published : Feb 19, 2021, 3:25 PM IST

China calls for Covid origin tracing in US
ಯುಎಸ್‌ನಲ್ಲಿ ಕೋವಿಡ್ ಮೂಲದ ಪತ್ತೆಗಾಗಿ ಚೀನಾ ಕರೆ

ವಾಷಿಂಗ್ಟನ್:ಚೀನಾದ ವುಹಾನ್ ನಗರದಲ್ಲಿ ಇರಬಹುದಾದ ಕೊರೊನಾ ವೈರಸ್​ನ ಮೂಲಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಹೇಳಿಕೆಗಳ ನಂತರ ಈಗ ಬೀಜಿಂಗ್, ಯುನೈಟೆಡ್ ಸ್ಟೇಟ್ಸ್‌ನಲ್ಲಿ ವೈರಸ್‌ನ ಮೂಲ-ಪತ್ತೆಹಚ್ಚುವ ಅಧ್ಯಯನ ಮಾಡುವಂತೆ ಜಾಗತಿಕ ಆರೋಗ್ಯ ಸಂಸ್ಥೆಯನ್ನು ಒತ್ತಾಯಿಸಿದೆ.

"ಚೀನಾದಲ್ಲಿ ವೈರಸ್​ ಮೂಲ ಪತ್ತೆ ಮಾಡುವ ಪ್ರಯತ್ನದಂತೆಯೇ ಅಮೆರಿಕದಲ್ಲಿಯೂ ವೈಜ್ಞಾನಿಕವಾಗಿ ವೈರಸ್​ ಮೂಲ ಪತ್ತೆ ಹಚ್ಚುವುದಕ್ಕಾಗಿ ಸ್ವತಃ ಅಮೆರಿಕ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಕಾರಾತ್ಮಕವಾಗಿ ಸಹಕಾರ ನೀಡಲಿ." ಎಂದು ಚೀನಾದ ವಿದೇಶಾಂಗ ಖಾತೆ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.

ಇದನ್ನೂ ಓದಿ:ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆ ಅಭಿವೃದ್ಧಿಗೆ ಯುಎಸ್​ ಕೊಡುಗೆ: ಬೈಡನ್​ ಸ್ಪಷ್ಟನೆ

ವುಹಾನ್‌ನಲ್ಲಿನ ಕೊರೊನಾ ವೈರಸ್​ ಮೂಲದ ಬಗ್ಗೆ ತನಿಖೆ ನಡೆಸಿದ WHO ತಜ್ಞರ ತಂಡವು ಚೀನಾದಲ್ಲಿ ಯಾವುದೇ ಪ್ರಾಣಿ ಪ್ರಭೇದಗಳಲ್ಲಿ ಕೋವಿಡ್ ಪ್ರಸರಣದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ ನಂತರ ಚೀನಾ ಈ ವಾದವನ್ನು ಮುಂದಿಟ್ಟಿದೆ.

ABOUT THE AUTHOR

...view details