ಕರ್ನಾಟಕ

karnataka

ETV Bharat / international

ಫೇಸ್​ಬುಕ್ ಆಯ್ತು.. ಇದೀಗ ಟ್ವಿಟರ್, ಇನ್​ಸ್ಟಾಗೆ ನಿರ್ಬಂಧ ವಿಧಿಸಿದ ಮ್ಯಾನ್ಮಾರ್ ಸೇನೆ..! - ಮ್ಯಾನ್ಮಾರ್​ನಲ್ಲಿ ಸೇನಾ ದಂಗೆ

ಮ್ಯಾನ್ಮಾರ್‌ನಲ್ಲಿ ಟೆಲಿಕಾಂ ಪೂರೈಕೆದಾರರಿಗೆ ಇನ್‌ಸ್ಟಾಗ್ರಾಮ್ ಅನ್ನು ಶಾಶ್ವತವಾಗಿ ನಿರ್ಬಂಧಿಸಲು ಆದೇಶಿಸಲಾಗಿದೆ. ಸಂಪರ್ಕವನ್ನು ಪುನಃಸ್ಥಾಪಿಸಲು ನಾವು ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಇದರಿಂದ ಮ್ಯಾನ್ಮಾರ್‌ನಲ್ಲಿರುವ ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ ಎಂದು ಫೇಸ್​ಬುಕ್ ವಕ್ತಾರರು ತಿಳಿಸಿದ್ದಾರೆ.

Instagram
Instagram

By

Published : Feb 6, 2021, 11:50 AM IST

ನಾಯ್ಪಿಟಾವ್ (ಮ್ಯಾನ್ಮಾರ್): ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ನೆಪದಲ್ಲಿ ದೇಶದಲ್ಲಿ ಫೇಸ್‌ಬುಕ್ ಅನ್ನು ನಿರ್ಬಂಧಿಸಲಾಗಿದೆ. ಈ ಬೆನ್ನಲ್ಲೇ ಮ್ಯಾನ್ಮಾರ್ ಸೈನ್ಯವು ಟ್ವಿಟರ್ ಮತ್ತು ಇನ್​ಸ್ಟಾಗ್ರಾಂ ಅನ್ನೂ ನಿರ್ಬಂಧಿಸಲು ಆದೇಶಿಸಿದೆ. ಇದರಿಂದಾಗಿ ದೇಶದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಾಗಾಗಿ ಮ್ಯಾನ್ಮಾರ್‌ನ ಸಾರಿಗೆ ಮತ್ತು ಸಂವಹನ ಸಚಿವಾಲಯವು, ಟ್ವಿಟರ್ ಮತ್ತು ಇನ್​ಸ್ಟಾಂಗ್ರಾಂ ನಿರ್ಬಂಧಿಸುವಂತೆ ಮೊಬೈಲ್ ಹಾಗೂ ಇಂಟರ್ನೆಟ್​​ ಸೇವಾ ಪೂರೈಕೆದಾರರಾದ ನಾರ್ವೇಜಿಯನ್ ಕಂಪನಿ ಟೆಲಿನರ್​ಗೆ ಆದೇಶಿಸಿದೆ.

ಸಚಿವಾಲಯದ ಈ ನಿರ್ಧಾರ ಸಾರ್ವಜನಿಕ ಸಂಭಾಷಣೆ ಹಾಗೂ ಜನರ ಹಕ್ಕುಗಳನ್ನು ಕಸಿಯುತ್ತದೆ. ಓಪನ್ ಇಂಟರ್ನೆಟ್ ಪ್ರಪಂಚದಾದ್ಯಂತ ಹೆಚ್ಚು ಅಪಾಯದಲ್ಲಿದೆ. ಬೇಕಾದರೆ ವ್ಯವಸ್ಥೆ ವಿರುದ್ಧ ಟ್ವೀಟ್ ಮಾಡುವುದನ್ನು ನಿಲ್ಲಿಸಿ ಎಂದು ಸಲಹೆ ನೀಡುತ್ತೇವೆ ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಟೆಲಿಕಾಂ ಪೂರೈಕೆದಾರರಿಗೆ ಇನ್‌ಸ್ಟಾಗ್ರಾಮ್ ಅನ್ನು ಶಾಶ್ವತವಾಗಿ ನಿರ್ಬಂಧಿಸಲು ಆದೇಶಿಸಲಾಗಿದೆ. ಸಂಪರ್ಕವನ್ನು ಪುನಃಸ್ಥಾಪಿಸಲು ನಾವು ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಇದರಿಂದ ಮ್ಯಾನ್ಮಾರ್‌ನಲ್ಲಿರುವ ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ ಎಂದು ಫೇಸ್​ಬುಕ್ ವಕ್ತಾರರು ತಿಳಿಸಿದ್ದಾರೆ.

53 ದಶ ಲಕ್ಷ ಜನರು ಬಳಸುತ್ತಿರುವ ಫೇಸ್‌ಬುಕ್‌ನ್ನು ನಿರ್ಬಂಧಿಸುವ ಸರ್ಕಾರದ ಕ್ರಮವನ್ನು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಲಾಗಿದೆ.

ಮ್ಯಾನ್ಮಾರ್​ನಲ್ಲಿ ಮಿಲಿಟರಿ ದಂಗೆಯನ್ನು ಹತ್ತಿಕ್ಕಲು ವಿಶ್ವಸಂಸ್ಥೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ. ಸೇನೆ ಬಂಧಿಸಿರುವ ಎಲ್ಲರನ್ನೂ ಬಿಡುಗಡೆ ಮಾಡಬೇಕು. ಇದಕ್ಕಾಗಿ ಭದ್ರತಾ ಸಂಸ್ಥೆ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ABOUT THE AUTHOR

...view details