ಕರ್ನಾಟಕ

karnataka

ETV Bharat / international

ಮೌಂಟ್‌ ಎವರೆಸ್ಟ್‌ ಎತ್ತರವನ್ನೊಮ್ಮೆ ಥಟ್ ಅಂತ ಹೇಳಿ? ಗೊತ್ತಿರದಿದ್ದರೆ ಇಲ್ಲಿದೆ ಉತ್ತರ

ಮೌಂಟ್ ಎವರೆಸ್ಟ್ ಶಿಖರವು 8848.86 ಮೀಟರ್​ ಎತ್ತರ ಇರುವುದಾಗಿ ನೇಪಾಳ ಸರ್ಕಾರ ಘೋಷಿಸಿದೆ.

By

Published : Dec 8, 2020, 2:37 PM IST

Mount Everest
ಮೌಂಟ್ ಎವರೆಸ್ಟ್

ಕಠ್ಮಂಡು (ನೇಪಾಳ): ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ ಎತ್ತರದ ಕುರಿತು ನೇಪಾಳ ಸರ್ಕಾರ ಪರಿಷ್ಕೃತ ಮಾಹಿತಿ ನೀಡಿದೆ. ಶಿಖರವು 8848.86 ಮೀಟರ್​ ಇರುವುದಾಗಿ ನೇಪಾಳದ ವಿದೇಶಾಂಗ ಸಚಿವ ಪ್ರದೀಪ್​ ಕುಮಾರ್​ ಗ್ಯಾವಾಲಿ ಘೋಷಣೆ ಮಾಡಿದ್ದಾರೆ.

ಈ ಮೊದಲು 8848 ಮೀಟರ್​ ಎತ್ತರವಿದ್ದ ಶಿಖರವು ಈಗ 0.86 ಸೆಂಟಿ ಮೀಟರ್ ಹೆಚ್ಚಳವಾಗಿದೆ. 1954ರಲ್ಲಿ ಸರ್ವೆ ಆಫ್ ಇಂಡಿಯಾ ಈ ಶಿಖರವನ್ನು ಅಳೆದು ಘೋಷಿಸಿದ್ದ 8,848 ಮೀಟರ್ ಎತ್ತರವೇ ಮೌಂಟ್ ಎವರೆಸ್ಟ್‌ನ ಅಂಗೀಕರಿಸಲ್ಪಟ್ಟ ಮತ್ತು ಗುರುತಿಸಲ್ಪಟ್ಟ ಎತ್ತರವಾಗಿತ್ತು.

ಓದಿ:ಹಿಂದೂ ರಾಷ್ಟ್ರ, ರಾಜಪ್ರಭುತ್ವದ ಮರುಸ್ಥಾಪನೆಗೆ ಒತ್ತಾಯಿಸಿ ನೇಪಾಳದಲ್ಲಿ ಧರಣಿ

2015ರಲ್ಲಿ ಸಂಭವಿಸಿದ್ದ ನೇಪಾಳ ಭೂಕಂಪದ ಬಳಿಕ ಮೌಂಟ್ ಎವರೆಸ್ಟ್‌ನ ಎತ್ತರದಲ್ಲಿ ಬದಲಾವಣೆಯಾಗಿರಬಹುದು ಎಂದು ತಜ್ಞರು ಶಂಕಿಸಿದ್ದರು. ಇದೇ ಕಾರಣಕ್ಕೆ ನೇಪಾಳ ಸರ್ಕಾರ ಶಿಖರದ ಎತ್ತರ ಅಳೆಯಲು ಯೋಜನೆಯೊಂದನ್ನು ರೂಪಿಸಿ, ಅಧಿಕಾರಿಗಳು, ತಜ್ಞರ ತಂಡವನ್ನು ರಚಿಸಿತು. ಚೀನಾ ಸಹಯೋಗದೊಂದಿಗೆ ಸಮೀಕ್ಷೆ ನಡೆಸಿ ಉಭಯ ರಾಷ್ಟ್ರಗಳು ಜಂಟಿಯಾಗಿ ವಿಶ್ವದ ಅತಿ ಎತ್ತರದ ಶಿಖರವನ್ನು ಅಳೆದು ಘೋಷಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದವು.

ABOUT THE AUTHOR

...view details