ಜಕಾರ್ತಾ:ಇಂಡೋನೇಷ್ಯಾದಲ್ಲಿ ಇಂದು ಮುಂಜಾನೆ 5:53 ಕ್ಕೆ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ. ಗೊರೊಂಟಾಲೊದಿಂದ 61 ಕಿಲೋ ಮೀಟರ್ ದೂರದಲ್ಲಿ ಭೂಮಿ ಕಂಪಿಸಿದೆ ಎಂದು ಯುಎಸ್ ಭೂ ವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಇಂಡೋನೇಷ್ಯಾದಲ್ಲಿ 5.2 ರಷ್ಟು ತೀವ್ರತೆಯ ಭೂಕಂಪನ.. ಕೋಟ್ಯಂತರ ರೂ. ಆಸ್ತಿ ನಷ್ಟ
ಇಂಡೋನೇಷ್ಯಾದ ಗೊರೊಂಟಾಲೊ ಬಳಿ ಭಾರಿ ಭೂಕಂಪ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿದೆ ಎನ್ನಲಾಗಿದೆ.
earthquake
ಹಲವು ಕಟ್ಟಡಗಳು ಧರೆಗುರುಳಿದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:ಮಣಪ್ಪುರಂ Gold loan branch ದರೋಡೆ: 3 ಗಂಟೆಯೊಳಗೆ ಇಬ್ಬರು ದುಷ್ಕರ್ಮಿಗಳ ಎನ್ಕೌಂಟರ್, ಮೂವರು ಎಸ್ಕೇಪ್