ಕರ್ನಾಟಕ

karnataka

ETV Bharat / international

ಮೆಕ್ಕಾ ಸಮೀಪ ಭೀಕರ ರಸ್ತೆ ಅಪಘಾತ: 35 ಮಂದಿ ಯಾತ್ರಾರ್ಥಿಗಳ ದುರ್ಮರಣ - mecca bus accident

ಬುಧವಾರ ಸಂಜೆ 7ರ ಸುಮಾರಿಗೆ ಈ ಬಸ್ ದುರಂತ ಸಂಭವಿಸಿದ್ದು, ಯಾತ್ರಾರ್ಥಿಗಳನ್ನು ತುಂಬಿದ್ದ ಬಸ್ ತೈಲ ಟ್ಯಾಂಕರ್‌ಗೆ​ ಡಿಕ್ಕಿಯಾಗಿ ಅಪಾರ ಪ್ರಮಾಣದ ಸಾವುನೋವು ಉಂಟಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಸ್ ಅಪಘಾತ

By

Published : Oct 17, 2019, 9:43 AM IST

ದುಬೈ:ಮುಸ್ಲಿಮರ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾ ಸಮೀಪ ಬಸ್ ಹಾಗೂ ತೈಲ ಟ್ಯಾಂಕರ್ ನಡುವಿನ ಅಪಘಾತದಲ್ಲಿ 35 ಮಂದಿ ಯಾತ್ರಾರ್ಥಿಗಳು ದುರ್ಮರಣಕ್ಕೀಡಾಗಿದ್ದಾರೆ.

ಬುಧವಾರ ಸಂಜೆ 7ರ ಸುಮಾರಿಗೆ ಈ ಬಸ್ ದುರಂತ ಸಂಭವಿಸಿದ್ದು, ಯಾತ್ರಾರ್ಥಿಗಳನ್ನು ತುಂಬಿದ್ದ ಬಸ್ ತೈಲ ಟ್ಯಾಂಕರ್‌ಗೆ​ ಡಿಕ್ಕಿಯಾಗಿ ಈ ಸಾವುನೋವು ಉಂಟಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತೈಲ ಟ್ಯಾಂಕರ್​​ಗೆ ಗುದ್ದಿದ ಪರಿಣಾಮ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ನಾಲ್ವರು ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಮಡಿದವರೆಲ್ಲರೂ ಅರಬ್ ಹಾಗೂ ಏಷ್ಯಾ ಮೂಲದವರು ಎಂದು ತಿಳಿದು ಬಂದಿದೆ.

ಪ್ರಧಾನಿ ಮೋದಿ ಸಂತಾಪ:

ಮೆಕ್ಕಾ ಸಮೀಪ ಸಂಭವಿಸಿದ ಬಸ್ ಅಪಘಾತಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಘಟನೆಯಲ್ಲಿ ಮಡಿದವರಿಗೆ ಕಂಬನಿ ಮಿಡಿದಿರುವ ಮೋದಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ABOUT THE AUTHOR

...view details