ವಾಷಿಂಗ್ಟನ್ (ಅಮೆರಿಕ): ಕಮಲಾ ಹ್ಯಾರಿಸ್ ಸೀರೆಯುಟ್ಟು ಅಮೆರಿಕ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಚುನಾವಣಾ ಪ್ರಚಾರದ ವೇಳೆ ಕಮಲಾ ತಮ್ಮ ಭಾರತೀಯ ಮೂಲವನ್ನು ಪದೇ ಪದೆ ಬಹಿರಂಗಪಡಿಸುತ್ತಿದ್ದರು. ಹಾಗಾಗಿ ಪದಗ್ರಹಣ ವೇಳೆ ಭಾರತೀಯ ಸಂಸ್ಕೃತಿಯಂತೆ ಸೀರೆಯುಡಲಿದ್ದಾರೆ ಎಂದು ಹೇಳಲಾಗ್ತಿದೆ.
ನೀವು ಸೀರೆ ಧರಿಸುತ್ತೀರಾ?
2019 ರಲ್ಲಿ ನಡೆದ ಚುನಾವಣಾ ಱಲಿಯಲ್ಲಿ ಗೆದ್ದರೆ ನೀವು ಸೀರೆ ಉಡುತ್ತೀರಾ ಎಂದು ಕೇಳಿದಾಗ, ಮೊದಲು ಗೆಲ್ಲೋಣ ಎಂದು ಕಮಲಾ ಉತ್ತರಿಸಿದ್ದರು. ಕಮಲಾ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈನಲ್ಲಿ ಹುಟ್ಟಿ ಬೆಳೆದು ಅಮೆರಿಕಕ್ಕೆ ವಲಸೆ ಬಂದರು. ಅವರು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅಪಾರ ಗೌರವ ಹೊಂದಿದ್ದು, ಎಲ್ಲ ಹಬ್ಬಗಳನ್ನು ಆಚರಿಸುವುದಾಗಿ ಹೇಳಿದರು. ಹಾಗಾಗಿ ಭಾರತೀಯ ಸಂಸ್ಕೃತಿಗನುಗುಣವಾಗಿ ಅವರು ಸೀರೆಯುಡುವ ಸಾಧ್ಯತೆ ದಟ್ಟವಾಗಿದೆ.