ಕರ್ನಾಟಕ

karnataka

ಅಧ್ಯಕ್ಷೀಯ ಹೋರಾಟದಲ್ಲಿ ಗೆಲುವು ನಮ್ಮದೇ: ಬೈಡನ್​  ಅಚಲ ವಿಶ್ವಾಸ

ಈಗಾಗಲೇ ಬಂದಿರುವ ಸಂಖ್ಯೆಗಳಿಂದ ಹೇಳಬಹುದು ಗೆಲುವು ನಮ್ಮದೇ ಎಂದು. ನಾವು ವಿರೋಧಿಗಳಾಗಿರಬಹುದು. ಆದರೆ, ನಾವು ಶತ್ರುಗಳಲ್ಲ, ನಾವು ಅಮೆರಿಕನ್ನರು ಎಂದು ಬೈಡನ್​ ಹೇಳಿದ್ದಾರೆ.

By

Published : Nov 7, 2020, 10:07 AM IST

Published : Nov 7, 2020, 10:07 AM IST

Updated : Nov 7, 2020, 10:20 AM IST

ಯುಎಸ್ ಡೆಮಾಕ್ರಟಿಕ್ ಅಧ್ಯಕ್ಷೀಯ ನಾಮಿನಿ ಜೋ ಬೈಡನ್​
ಬೈಡನ್​ ವಿಶ್ವಾಸ

ವಾಷಿಂಗ್ಟನ್ (ಯುಎಸ್):ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮತ ಎಣಿಕೆ ಮುಂದುವರಿದಂತೆ, ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈಗಾಗಲೇ ಬಂದಿರುವ ಸಂಖ್ಯೆಗಳಿಂದ ದ ಗೆಲುವು ನಮ್ಮದೇ ಎಂದು. ನಾವು ಈ ಚುನಾವಣೆಯಲ್ಲಿ ಗೆಲುವು ದಾಖಲಿಸಲಿದ್ದೇವೆ ಎಂದು ಯುಎಸ್ ಡೆಮಾಕ್ರಟಿಕ್ ಅಧ್ಯಕ್ಷೀಯ ನಾಮಿನಿ ಜೋ ಬೈಡನ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸಾಕಷ್ಟು ಸಂಕೀರ್ಣತೆಯಿದೆ. ಆದರೆ ನಾವು ಇಂತಹ ಸಂದರ್ಭದಲ್ಲಿ ಸಾಕಷ್ಟು ತಾಳ್ಮೆಯಿಂದ ಇರಬೇಕು. ಮತ ಎಣಿಕೆ ನಿಲ್ಲಿಸಲು ಯಾರೆಲ್ಲ ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ. ನಾವು ಪ್ರಜಾಪ್ರಭುತ್ವದಲ್ಲಿ ಬಲವಾದ ಅಭಿಪ್ರಾಯಗಳನ್ನು ಹೊಂದಿದ್ದೇವೆ. ಆದರೆ ರಾಜಕೀಯದ ಉದ್ದೇಶ ರಾಷ್ಟ್ರಕ್ಕಾಗಿ ಕೆಲಸ ಮಾಡುವುದು. ನಾವು ವಿರೋಧಿಗಳಾಗಿರಬಹುದು. ಆದರೆ ನಾವು ಶತ್ರುಗಳಲ್ಲ, ನಾವು ಅಮೆರಿಕನ್ನರು ಎಂದು ಬೈಡನ್​ ಹೇಳಿದ್ದಾರೆ.

ಸಿಎನ್‌ಎನ್ ಪ್ರಕ್ಷೇಪಗಳ ಪ್ರಕಾರ ಬೈಡನ್ ಪೆನ್ಸಿಲ್ವೇನಿಯಾ, ಜಾರ್ಜಿಯಾ, ನೆವಾಡಾ ಮತ್ತು ಅರಿಝೋನಾ ರಾಜ್ಯಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ. ಟ್ರಂಪ್ ಉತ್ತರ ಕೆರೊಲಿನಾದಲ್ಲಿ ಮುನ್ನಡೆ ಗಳಿಸಿದ್ದಾರೆ.

ಬೈಡನ್ ಪೆನ್ಸಿಲ್ವೇನಿಯಾದಲ್ಲಿ 13,641 ಮತಗಳಿಂದ, ನೆವಾಡಾದಲ್ಲಿ 20,137 ಮತಗಳಿಂದ ಮತ್ತು ಅರಿಝೋನಾದಲ್ಲಿ 39,769 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಮತ್ತೊಂದೆಡೆ, ಉತ್ತರ ಕೆರೊಲಿನಾದಲ್ಲಿ ಟ್ರಂಪ್ 76,737 ಮತಗಳಿಂದ ಮುನ್ನೆಡೆ ಸಾಧಿಸಿದ್ದಾರೆ.

Last Updated : Nov 7, 2020, 10:20 AM IST

ABOUT THE AUTHOR

...view details