ವಾಷಿಂಗ್ಟನ್:ಕೊರೊನಾ ವೈರಸ್ ಚೀನಾ ನಿಭಾಯಿಸಿದ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್, WHOದೊಂದಿಗಿನ ಅಮೆರಿಕದ ದಶಕಗಳ ಸದಸ್ಯತ್ವವನ್ನು ತಕ್ಷಣವೇ ನಿಲ್ಲಿಸುವುದಾಗಿ ಘೋಷಿಸಿದ್ದಾರೆ.
1948ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಯುಎಸ್ ಒಂದು ಪ್ರಮುಖ ಶಕ್ತಿಯಾಗಿತ್ತು. ಅಲ್ಲದೆ ಅಮೆರಿಕವು ಆರೋಗ್ಯ ಸಂಸ್ಥೆಗೆ ಹೆಚ್ಚು ಹಣ ಒದಗಿಸುವ ದೇಶವಾಗಿದೆ. ವರ್ಷಕ್ಕೆ 450 ದಶಲಕ್ಷ ಡಾಲರ್ಅನ್ನು ಅಮೆರಿಕಾ ಒದಗಿಸುತ್ತದೆ. ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಒಪ್ಪಂದಗಳಿಂದ ಅಮೆರಿಕ ವಿವಾದಾತ್ಮಕವಾಗಿ ಹಿಂದೆ ಸರಿದಿರುವುದು ಇದೇ ಮೊದಲಲ್ಲ. ಈವರೆಗಿನ ಅಮೆರಿಕಾದ ಇಂತಹ ವರ್ತನೆಗೆ ಹಲವು ನಿದರ್ಶನಗಳಿವೆ.
ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ:
ನವೆಂಬರ್ 06, 1977ರಲ್ಲಿ ಅಮೆರಿಕ ಐಎಲ್ಒನಿಂದ ಹಿಂದೆ ಸರಿಯಿತು. ಇದಕ್ಕೆ 1934ರಲ್ಲಿ ಅದು ಸೇರಿಕೊಂಡಿತ್ತು.
ಯುನೆಸ್ಕೋ:ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ನೇತೃತ್ವದಲ್ಲಿ ಯುನೈಟೆಡ್ ಸ್ಟೇಟ್ಸ್, 195 ಸದಸ್ಯರ ಸಂಘಟನೆಯಿಂದ ಹಿಂದೆ ಸರಿದಿದೆ. 1984 ರಲ್ಲಿ ಹಣಕಾಸಿನ ದುರುಪಯೋಗ ಮತ್ತು ಅದರ ಕೆಲವು ನೀತಿಗಳಲ್ಲಿ ಯುಎಸ್ ವಿರೋಧಿ ಪಕ್ಷಪಾತದ ಆರೋಪದ ಮೇಲೆ ಅಮೆರಿಕ ಹೊರನಡೆದಿತ್ತು.
ಪ್ಯಾರಿಸ್ ಕ್ಲೈಮೇಟ್ ಒಪ್ಪಂದ: ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಳ್ಳುವುದಾಗಿ ಟ್ರಂಪ್ 2017 ರ ಜೂನ್‌ನಲ್ಲಿ ಘೋಷಿಸಿದರು. 2015ರ ಒಪ್ಪಂದವು ಅಮೆರಿಕದ ಆರ್ಥಿಕತೆಗೆ ಕೆಟ್ಟದು ಎಂದು ವಾದಿಸಿದ ಸಂಪ್ರದಾಯವಾದಿಗಳ ಪರ ಟ್ರಂಪ್ ನಿಂತರು.