ಕರ್ನಾಟಕ

karnataka

ETV Bharat / international

ಈ ಮಾತ್ರೆ ನುಂಗಿ.... ಕೋವಿಡ್​​​​ಗೆ ಅಲ್ಲೇ ಚರಮಗೀತೆ ಬರೆಯಿರಿ! - ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾಲಯ

ಅಮೆರಿಕ ಸಂಶೋಧಕರು ಕೆಮ್ಮಿನ ಮಾತ್ರೆಗಳನ್ನ ಅಭಿವೃದ್ದಿಪಡಿಸುತ್ತಿದ್ದು, ಕೊರೊನಾ ಸೋಂಕು ಹರಡುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳುತ್ತಿದ್ದಾರೆ.

us scientists inventions to fight with corona
ಕೊರೊನಾ ನಿಯಂತ್ರಣಕ್ಕೆ ಕೆಮ್ಮಿನ ಮಾತ್ರೆ ಅಭಿವೃದ್ದಿ

By

Published : May 16, 2020, 5:25 PM IST

ಫ್ಲೋರಿಡಾ( ಅಮೆರಿಕ): ಕೊರೊನಾ ವೈರಸ್ ಹರಡುವುದನ್ನು ತಡೆಯಲು ಹಲವು ಸಂಶೋಧನೆಗಳು ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಅಮೆರಿಕ ಸಂಶೋಧಕರು ಕೆಮ್ಮಿನ ಮಾತ್ರೆಗಳನ್ನ ಅಭಿವೃದ್ಧಿಪಡಿಸುತ್ತಿದ್ದಾರೆ. ಈ ಮಾತ್ರೆಗಳನ್ನು ನುಂಗಿದರೆ ನಮ್ಮ ಗಂಟಲಲ್ಲಿನ ಲಾಲಾರಸದ ತೂಕ ಹೆಚ್ಚುತ್ತದೆ ಮತ್ತು ಲಾಲಾರಸ ಸುಲಭವಾಗಿ ಅಂಟಿಕೊಳ್ಳುವಂತೆ ಮಾತ್ರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವರದಿಯಾಗಿದೆ.

ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರಗಳಂತ ಕ್ರಮಗಳು ಕೊರೊನಾ ಸೋಂಕು ಹರಡುವುದನ್ನು ತಡೆಯುವಲ್ಲಿ ಗಣನೀಯ ಪಾತ್ರ ವಹಿಸಿವೆ. ಕೈಗಾರಿಕೆಗಳು, ಕಚೇರಿಗಳು, ಅಂಗಡಿಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಆಸ್ಪತ್ರೆಗಳಂತಹ ಪ್ರದೇಶದಲ್ಲಿ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ ಎಂದು ಸಂಶೋಧಕರ ಅಭಿಪ್ರಾ ಪಟ್ಟಿದ್ದಾರೆ.

ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಸಾಮಾಜಿಕ ಅಂತರವನ್ನು 6 ರಿಂದ 2 ಅಡಿಗಳಿಗೆ ಇಳಿಸಲು ಹೊಸ ಕೆಮ್ಮಿನ ಮಾತ್ರೆಗಳ ಅಭಿವೃದ್ಧಿಯತ್ತ ಗಮನ ಹರಿಸುತ್ತಿದೆ. ಈ ಮಾತ್ರೆಗಳನ್ನು ಎಲ್ಲಿಯಾದರೂ ಹೋಗುವ ಮೊದಲು ಸೇವಿಸಿದರೆ ಕೆಮ್ಮು ಅಥವಾ ಸೀನಿದಾಗ ನಮ್ಮ ಬಾಯಿಯಿಂದ ಹೊರಬರುವ ದ್ರವ ಗಾಳಿಯಲ್ಲಿ ಹೆಚ್ಚು ದೂರ ಹೋಗದೇ ನೆಲಕ್ಕೆ ಬೀಳುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

ಈ ಮಾತ್ರೆಗಳನ್ನು ತೆಗೆದುಕೊಂಡು ಮಾಸ್ಕ್​ಗಳನ್ನು ಧರಿಸಿದರೆ 2 ಅಡಿ ಅಂತರ ಕಾಯ್ದುಕೊಂಡರೂ ಕೊರೊನಾ ಹರಡುವುದನ್ನು ತಡೆಯಬಹುದು ಎಂದು ಸಂಶೋಧಕರು ಹೇಳುತ್ತಾರೆ. ಹೈ ಸ್ಪೀಡ್ ಕ್ಯಾಮರಾಗಳನ್ನು ಬಳಸಿ ಪರಿಶೀಲನೆ ನಡೆಸಿದ್ದು, ಈ ಮಾತ್ರೆ ತೆಗೆದುಕೊಂಡ ವ್ಯಕ್ತಿ ಕೆಮ್ಮಿದಾಗ ಆತನ ಬಾಯಿಯಿಂದ ಬಂದ ದ್ರವ ಗಾಳಿಯಲ್ಲಿ ಹೆಚ್ಚು ದೂರ ಹೋಗದೇ ಅಲ್ಲೇ ನೆಲಕ್ಕೆ ಬಿದ್ದಿರುವುದನ್ನು ಗಮನಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

-

ABOUT THE AUTHOR

...view details