ಕರ್ನಾಟಕ

karnataka

ETV Bharat / international

ಅಧ್ಯಕ್ಷೀಯ ಚುನಾವಣೆಗೆ 247 ಮಿಲಿಯನ್ ಡಾಲರ್ ಸಂಗ್ರಹಿಸಿದ ಟ್ರಂಪ್.. ಆದ್ರೂ ಬಿಡೆನ್ ಮುಂದು..!

ನವೆಂಬರ್ 3ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡೆನ್ ಧನ ಸಂಗ್ರಹಣೆ ವಿಚಾರದಲ್ಲಿ ದಾಖಲೆ ಮಾಡಿದ್ದಾರೆ.

By

Published : Oct 16, 2020, 5:10 PM IST

Donald Trump
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ (ಅಮೆರಿಕ) : ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷದ ಮುಖಂಡರು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ನಿಧಿ ಸಂಗ್ರಹಣೆಗೆ ಮುಂದಾಗಿವೆ.

ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿಯಾದ ಡೊನಾಲ್ಡ್ ಟ್ರಂಪ್ ಕೂಡಾ ಈ ಬಾರಿ ನಿಧಿ ಸಂಗ್ರಹಣೆ ಮಾಡಿದ್ದು, ಸುಮಾರು 247 ಮಿಲಿಯನ್ ಅಮೆರಿಕನ್ ಡಾಲರ್ ಅನ್ನ ಸಂಗ್ರಹಿಸಲಾಗಿದೆ ಎಂದು ರಿಪಬ್ಲಿಕನ್ ನ್ಯಾಷನಲ್ ಕಮಿಟಿ ಘೋಷಣೆ ಮಾಡಿದೆ.

ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಚುನಾವಣೆಗಾಗಿ 383 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಸಂಗ್ರಹಿಸಿದ್ದು, ಹಣ ಸಂಗ್ರಹಿಸುವಲ್ಲಿ ಡೊನಾಲ್ಡ್ ಟ್ರಂಪ್​ಗಿಂತ ಭಾರಿ ಮುಂದಿದ್ದಾರೆ.

2016ರ ಸೆಪ್ಟೆಂಬರ್​ನಲ್ಲಿ ಚುನಾವಣೆ ನಡೆದಾಗ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್, 154 ಮಿಲಿಯನ್ ಡಾಲರ್​​ ಅನ್ನು ಚುನಾವಣೆಗಾಗಿ ಸಂಗ್ರಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಹಣ ಸಂಗ್ರಹಣೆಯ ಬಗ್ಗೆ ಜೋ ಬಿಡೆನ್ ಟ್ವೀಟ್ ಮಾಡಿದ್ದು, ಇದು ನನ್ನ ಜೀವನದಲ್ಲೇ ಅತ್ಯಂತ ದೊಡ್ಡ ಮೊತ್ತದ ಹಣ ಸಂಗ್ರಹವಾಗಿದ್ದು, ಜನರಿಗೆ ಋಣಿಯಾಗಿರುತ್ತೇನೆ ಎಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಪ್ರಚಾರ ಸಂವಹನ ನಿರ್ದೇಶಕರಾದ ಟಿಮ್ ಮುರ್ಟಾಗ್ ಶಕ್ತಿ, ಸಂಪನ್ಮೂಲ ಹಾಗೂ ತಳಮಟ್ಟದ ಶ್ರಮದಿಂದ ಚುನಾವಣೆಯಲ್ಲಿ ಅಂತಿಮ ಹಂತ ತಲುಪಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details