ಕರ್ನಾಟಕ

karnataka

ETV Bharat / international

ಅಮೆರಿಕದಲ್ಲಿ ಪಾಕಿಸ್ತಾನದ ಏರ್​​​​ಲೈನ್ಸ್​​​​​​​ ವಿಮಾನಗಳ ಹಾರಾಟ ನಿಷೇಧ!

ಪೈಲಟ್‌ಗಳು ನಕಲಿ ಅಥವಾ ಸಂಶಯಾಸ್ಪದ ಪರವಾನಗಿಗಳನ್ನು ಹೊಂದಿದ್ದಾರೆ ಎಂದು ತಿಳಿಸುವ ವರದಿಯ ಹಿನ್ನೆಲೆ ಕಳೆದ ತಿಂಗಳು ಪಾಕಿಸ್ತಾನ ತನ್ನ ಮೂರನೇ ಒಂದು ಭಾಗದಷ್ಟು ಪೈಲಟ್‌ಗಳನ್ನು ಕೆಲಸದಿಂದ ತೆಗೆದು ಹಾಕಿದೆ.

By

Published : Jul 10, 2020, 1:01 PM IST

pia
pia

ವಾಷಿಂಗ್ಟನ್:ಪಾಕಿಸ್ತಾನದ ಪೈಲಟ್‌ಗಳ ಪ್ರಮಾಣೀಕರಣದ ಬಗ್ಗೆ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಕಳವಳ ವ್ಯಕ್ತಪಡಿಸಿದ ಹಿನ್ನೆಲೆ ಪಾಕಿಸ್ತಾನ ಇಂಟರ್​​​ನ್ಯಾಷನಲ್​​ ಏರ್​​​​ಲೈನ್ಸ್​​ ಚಾರ್ಟರ್ ಫ್ಲೈಟ್‌ಗಳು ಅಮೆರಿಕದಲ್ಲಿ ತನ್ನ ಕಾರ್ಯಾಚರಣೆ ಪ್ರಾರಂಭಿಸುವುದನ್ನು ಅಧಿಕೃತವಾಗಿ ರದ್ದುಪಡಿಸಿದೆ ಎಂದು ಅಮೆರಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಪೈಲಟ್‌ಗಳು ನಕಲಿ ಅಥವಾ ಸಂಶಯಾಸ್ಪದ ಪರವಾನಗಿಗಳನ್ನು ಹೊಂದಿದ್ದಾರೆ ಎಂದು ತಿಳಿಸುವ ವರದಿ ಬಹಿರಂಗವಾದ ಹಿನ್ನೆಲೆ ಕಳೆದ ತಿಂಗಳು ಪಾಕಿಸ್ತಾನ ತನ್ನ ಮೂರನೇ ಒಂದು ಭಾಗದಷ್ಟು ಪೈಲಟ್‌ಗಳನ್ನು ಕೆಲಸದಿಂದ ತೆಗೆದು ಹಾಕಿದೆ.

ಯುರೋಪಿಯನ್ ಒಕ್ಕೂಟದ ವಾಯುಯಾನ ಸುರಕ್ಷತಾ ಸಂಸ್ಥೆಯೂ ಈಗಾಗಲೇ ಪಾಕಿಸ್ತಾನದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗೆ ಕನಿಷ್ಠ ಆರು ತಿಂಗಳವರೆಗೆ ಯುರೋಪಿಗೆ ಪ್ರವೇಶಿಸಲು ಅನುಮತಿ ಇಲ್ಲ ಎಂದು ಘೋಷಿಸಿದೆ.

ABOUT THE AUTHOR

...view details