ವಾಷಿಂಗ್ಟನ್:ಉತ್ತರ ಕೊರಿಯಾ ಮೇಲೆ ಕಠಿಣ ಅಂತಾರಾಷ್ಟ್ರೀಯ ಒತ್ತಡ ತರಲು ಅಮೆರಿಕಾದ ಖಜಾನೆ ವಿಭಾಗ ಹೇರಿದ್ದ ಎಲ್ಲಾ ನಿರ್ಬಂಧಗಳನ್ನು ರದ್ದು ಮಾಡುವಂತೆ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.
ಉತ್ತರ ಕೊರಿಯಾ ಮೇಲಿನ ಖಜಾನೆ ವಿಭಾಗದ ನಿರ್ಬಂಧವನ್ನು ರದ್ದು ಮಾಡುವಂತೆ ಆದೇಶ ನೀಡಿದ್ದಾಗಿ ಸ್ವತಃ ಡೊನಾಲ್ಟ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಹನೊಯ್ನಲ್ಲಿ ಉಭಯ ನಾಯಕರ ಮಾತಕತೆ ಬಿದ್ದು ಹೋದರೂ, ಟ್ರಂಪ್ ವೈಯಕ್ತಿಕವಾಗಿ ಕಿಮ್ ಜಾಂಗ್ ಉನ್ರನ್ನು ಮೆಚ್ಚಿಕೊಂಡಿದ್ದಾರೆ. ಅದಕ್ಕಾಗಿ ಈ ನಿರ್ಬಂಧಗಳ ಅನಗತ್ಯ ಎಂದು ಅಮೆರಿಕ ಅಧ್ಯಕ್ಷರ ವಕ್ತಾರ ಸರಹ್ ಸ್ಯಾಂಡರ್ಸ್ ಹೇಳಿದ್ದಾರೆ.
ಇದನ್ನು ಡೆಮಾಕ್ರಟಿಕ್ ಪಕ್ಷದ ಆ್ಯಡಂ ಸ್ಕಿಫ್ ಗೇಲಿ ಮಾಡಿದ್ದಾರೆ. ಇದು ಮೂರ್ಖತನದ ಕೆಲಸ ಎಂದು ಕಿಡಿಕಾರಿದ್ದಾರೆ.