ಕರ್ನಾಟಕ

karnataka

ಕಾಶ್ಮೀರ ವಿಚಾರ ಮಂಡನೆಗೆ ಮತ್ತೊಂದು ವೇದಿಕೆ ಸಿದ್ಧ! ಪಾಕಿಸ್ತಾನದ ವಾದ ಹೇಗಿರಲಿದೆ?

ಕಾಶ್ಮೀರ ವಿಚಾರವನ್ನು ಈಗಾಗಲೇ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿರುವ ಪಾಕಿಸ್ತಾನ ಭಾರಿ ಮುಖಭಂಗ ಎದುರಿಸಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆದ ಬಳಿಕವೂ ಮತ್ತೊಮ್ಮೆ ಪಾಕಿಸ್ತಾನ ಇದೇ ವಿಚಾರವನ್ನು ಪ್ರಸ್ತಾಪಿಸಲು ಮುಂದಾಗಿದ್ದು, ಯಾವ ರೀತಿ ಈ ಬಾರಿ ಮಂಡನೆ ಮಾಡಲಿದೆ ಎನ್ನುವ ಕುತೂಹಲ ಮೂಡಿದೆ.

By

Published : Sep 22, 2019, 6:45 PM IST

Published : Sep 22, 2019, 6:45 PM IST

ಕಾಶ್ಮೀರ

ನ್ಯೂಯಾರ್ಕ್​:ಇದೇ ತಿಂಗಳ 27ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಮಾಡಲಿದ್ದು ಮತ್ತೊಮ್ಮೆ ಕಾಶ್ಮೀರ ಹಾಗೂ ಭಯೋತ್ಪಾದನೆ ಜಾಗತಿಕ ನಾಯಕರ ಮುಂದೆ ರಿಂಗಣಿಸಲಿದೆ.

ಕಾಶ್ಮೀರ ವಿಚಾರವನ್ನು ಈಗಾಗಲೇ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿರುವ ಪಾಕಿಸ್ತಾನ ಭಾರಿ ಮುಖಭಂಗ ಎದುರಿಸಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆದ ಬಳಿಕವೂ ಮತ್ತೊಮ್ಮೆ ಪಾಕಿಸ್ತಾನ ಇದೇ ವಿಚಾರವನ್ನು ಪ್ರಸ್ತಾಪಿಸಲು ಮುಂದಾಗಿದ್ದು, ಯಾವ ರೀತಿ ಈ ಬಾರಿ ಮಂಡನೆ ಮಾಡಲಿದೆ ಎನ್ನುವ ಕುತೂಹಲ ಮೂಡಿದೆ.

ಐತಿಹಾಸಿಕ 'ಹೌಡಿ ಮೋದಿ'ಗೆ ಕ್ಷಣಗಣನೆ: ಮೋದಿ-ಟ್ರಂಪ್‌ ಭಾಷಣಕ್ಕೆ ವಿಶ್ವದೆಲ್ಲೆಡೆ ಕಾತರ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಾಗತಿಕ ನಾಯಕರ ಗಮನ ಸೆಳೆಯಲು ಕೆಲ ದೇಶಗಳ ನಾಯಕರು ಒಂದಷ್ಟು ಗಿಮಿಕ್ ಮಾಡುವುದನ್ನು ನಾನು ಸಾಕಷ್ಟು ಬಾರಿ ನೋಡಿದ್ದೇನೆ. ಆದರೆ ಅವರು ಹೇಗಿದ್ದಾರೆ ಎನ್ನುವುದನ್ನು ಜನರಿಗೆ ತಿಳಿದಿದೆ ಎಂದು ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಶನಿವಾರ ಹೇಳಿದ್ದಾರೆ.

ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಉಗ್ರರ ಬಗ್ಗೆ ಮತ್ತಷ್ಟು ಕಠಿಣ ನಿಲುವು ತಳೆದಿದ್ದು, ಈ ನಡೆ ಹೀಗೆ ಮುಂದುವರೆಯಲಿದೆ ಎನ್ನುವ ವಿಚಾರವನ್ನು ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.

ABOUT THE AUTHOR

...view details